Wednesday, June 19, 2024
Homeಕರಾವಳಿಸೀಲ್ ಅಗಿರುವ ಬಂಟ್ವಾಳದ ಜನತೆಗೆ ನ್ಯಾಯ ಬೆಲೆ ಅಂಗಡಿ ಬದಲಾವಣೆ ಮಾಡಿದ ತಹಶೀಲ್ದಾರ್

ಸೀಲ್ ಅಗಿರುವ ಬಂಟ್ವಾಳದ ಜನತೆಗೆ ನ್ಯಾಯ ಬೆಲೆ ಅಂಗಡಿ ಬದಲಾವಣೆ ಮಾಡಿದ ತಹಶೀಲ್ದಾರ್

spot_img
- Advertisement -
- Advertisement -

ಬಂಟ್ವಾಳ: ಬಂಟ್ವಾಳ ಪೇಟೆ ಸೀಲ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಾಲ್ಕು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸ್ತುತ ಜನರಿಗೆ ಪಡಿತರ ಪಡೆಯುವುದಕ್ಕೆ ತೊಂದರೆಯಾಗಿದ್ದು, ಹೀಗಾಗಿ ತಾಲೂಕು ಆಡಳಿತ ಜನರಿಗೆ ಪಡಿತರ ಪಡೆಯಲು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿದೆ.
ಬಂಟ್ವಾಳ ಟಿಎಪಿಸಿಎಂಎಸ್ ಚಿಲ್ಲರೆ ಮಳಿಗೆ ಹಾಗೂ ಲಕ್ಷ್ಮೀ ನಾರಾಯಣ ಕಿಣಿ ಬಂಟ್ವಾಳ ಈ ನ್ಯಾಯಬೆಲೆ ಅಂಗಡಿಯವರು ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಪಡಿತರ ಪಡೆಯಬಹುದಾಗಿದೆ.
ಸುಮಿತ್ರ ಕಿಣಿ ಅರಳಿ ಹಾಗೂ ರವೀಂದ್ರ ಪ್ರಭು ಅಮ್ಟಾಡಿ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯುವವರು ಲೊರೆಟ್ಟೊ ಖಾಸಗಿ ಹಿ.ಪ್ರಾ.ಶಾಲೆಯಲ್ಲಿ ಪಡಿತರ ಪಡೆಯುವಂತೆ ಬಂಟ್ವಾಳ ತಹಶೀಲ್ದಾರ್ ಅವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!