Friday, June 27, 2025
Homeಅಪರಾಧಅತ್ಯಾಚಾರ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ಕಾನ್‌ಸ್ಟೆಬಲ್‌ ನಿಂದ ಅತ್ಯಾಚಾರ! 

ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ನಂಬಿಸಿ ಕಾನ್‌ಸ್ಟೆಬಲ್‌ ನಿಂದ ಅತ್ಯಾಚಾರ! 

spot_img
- Advertisement -
- Advertisement -

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವಾಗಿದ್ದು, ಆಕೆ ಸಹಾಯ ಕೋರಿ ಪೊಲೀಸ್ ಕಾನ್ ಸ್ಟೆಬಲ್ ಬಳಿ ಬಂದಾಗ ಆತ ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಆಕೆಯನ್ನು ನಂಬಿಸಿ ಓಯೋ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಬೊಮ್ಮನಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ ಅರುಣ್‌ ತೋನೆಪ್‌ ಮತ್ತು ಸಂತ್ರಸ್ತೆಯ ಪ್ರಿಯಕರ ವಿಕ್ಕಿ ಸೇರಿ ಇಬ್ಬರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಹಾಗೂ ಬಿಎನ್‌ಎಸ್‌ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಕರಣದ ವಿವರ: ಸಂತ್ರಸ್ತ ಬಾಲಕಿಗೆಎದುರು ಮನೆ ನಿವಾಸಿಯ ಪರಿಚಯವಾಗಿದ್ದು, ಆತನು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಅನಂತರ ಆರೋಪಿಯ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿದ್ದು, ಹೀಗಾಗಿ ಸಂತ್ರಸ್ತೆ ಮದುವೆಯಾಗುವಂತೆ ಕೇಳಿದ್ದಾಳೆ. ಆಗ ಆರೋಪಿ ಸಾಧ್ಯವಿಲ್ಲ ಎಂದಿದ್ದಲ್ಲದೆ, ಈ ವಿಚಾರವನ್ನು ಯಾರೊಂದಿಗೂ ಹೇಳದಂತೆ ತಾಕೀತು ಮಾಡಿ ಹಲ್ಲೆ ನಡೆಸಿದ್ದು, ಇದರಿಂದ ಗಾಬರಿಗೊಂಡ ಬಾಲಕಿ ತಾಯಿಗೆ ವಿಚಾರ ತಿಳಿಸಿದ್ದಾಳೆ. ಘಟನೆಯ ಬಗ್ಗೆ ಸಂತ್ರಸ್ತೆಯ ತಾಯಿ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದರು.

ಆದರೆ ಪ್ರಕರಣದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಕಾನ್‌ಸ್ಟೆಬಲ್‌ ಅರುಣ್‌, ತಾನು ಪ್ರಕರಣದಲ್ಲಿ ಸಹಾಯ ಮಾಡುತ್ತೇನೆ ಎಂದು ನಂಬಿಸಿ, ಬಾಲಕಿಗೆ ಕೆಲಸವನ್ನು ಕೊಡಿಸುತ್ತೇನೆ ಎಂದು ಮಾತು ನೀಡಿದ್ದಾನೆ. 2024ರ ಡಿ. 18ರಂದು ಬಿಟಿಎಂ ಲೇಔಟ್‌ನಲ್ಲಿರುವ ಪಿಜಿಯಲ್ಲಿ ಬಳಿಕ ಪ್ರತ್ಯೇಕವಾಗಿ ಇರಬೇಕೆಂದು ಸೂಚಿಸಿ ಇರಿಸಿದ್ದ. ನಂತರದಲ್ಲಿ ಡಿ. 22 ಮತ್ತು 30ರಂದು ಬಿಟಿಎಂ ಲೇಔಟ್‌ನ ಓಯೋ ರೂಮ್‌ಗೆ ಬಾಲಕಿಯನ್ನು ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ. ಆ ದೃಶ್ಯಗಳನ್ನು ವೀಡಿಯೋ ಮಾಡಿಕೊಂಡಿದ್ದಾನೆ. ಸಂತ್ರಸ್ತೆ ಎಚ್ಚರಗೊಂಡಾಗ ದೈಹಿಕ ಸಂಪರ್ಕ ಬೆಳೆಸಿದ ವೀಡಿಯೋಗಳು ನನ್ನ ಬಳಿಯಿವೆ ಎಂದು ಬೆದರಿಸಿದ್ದನು. ಈ ವಿಚಾರವನ್ನು ತಾಯಿ ಬಳಿ ಸಂತ್ರಸ್ತೆ ಹೇಳಿಕೊಂಡಿದ್ದಳು.

ಇದೀಗ ಘಟನೆಯ ಬಗ್ಗೆ ಸಂತ್ರಸ್ತೆಯ ತಾಯಿ ಮೈಕೋ ಲೇಔಟ್‌ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ವಿರುದ್ಧ ಪ್ರಕರಣ ದಾಖಲಿಸಿದ್ದರು.

- Advertisement -
spot_img

Latest News

error: Content is protected !!