Wednesday, June 24, 2026
Homeತಾಜಾ ಸುದ್ದಿರಾಮ ಮಂದಿರಕ್ಕೆ ಇಂದಿಗೆ ಒಂದು ವರ್ಷದ ಸಂಭ್ರಮ; ರಾಮನಗರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ರಾಮ ಮಂದಿರಕ್ಕೆ ಇಂದಿಗೆ ಒಂದು ವರ್ಷದ ಸಂಭ್ರಮ; ರಾಮನಗರಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

- Advertisement -
- Advertisement -

ನವದೆಹಲಿ; ಕೋಟ್ಯಂತರ ಹಿಂದೂಗಳ ಕನಸಾಗಿದ್ದ ರಾಮಮಂದಿರ ಉದ್ಘಾಟನೆಯಾಗಿ ಹಿಂದೂ ಪಂಚಾಂಗದ ಪ್ರಕಾರ ಇವತ್ತಿಗೆ ಒಂದು ವರ್ಷ. ಈ ಹಿನ್ನೆಲೆ ಜ.11ರಿಂದ 13ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ರಾಮನಗರಿ ಅಯೋಧ್ಯೆ ಮಾತ್ರವಲ್ಲದೇ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ.

ಪ್ರತಿಷ್ಠಾ ವಾರ್ಷಿಕೋತ್ಸದ ಹಿನ್ನೆಲೆ ಇಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಬಾಲ ರಾಮನಿಗೆ ಅಭಿಷೇಕ ನೆರವೇರಿಸಲಿದ್ದಾರೆ. ಮಂದಿರದ ಸಮೀಪವಿರುವ ಅಂಗದ ಟೀಲಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜತೆಗೆ, ಖ್ಯಾತ ಗಾಯಕರ ಭಕ್ತಿ ಗೀತೆಗಳೂ ಬಿಡುಗಡೆಗೊಳ್ಳಲಿವೆ. ಈಗಾಗಲೇ ದೇಶಾದ್ಯಂತವಿರುವ ಸಂತರು ಹಾಗೂ ಭಕ್ತರಿಗೆ ಟ್ರಸ್ಟ್‌ ಆಮಂತ್ರಣ ಕಳಿಸಿದೆ.

ಇಂದಿನಿಂದ 3 ದಿನ ಕಾರ್ಯಕ್ರಮ ಹೇಗಿರಲಿದೆ

• ಜ.11ರ ಮೊದಲ ದಿನ ಪ್ರತಿಷ್ಟಾ ದ್ವಾದಶಿಯ ಆರಂಭಿಕ ದಿನ, ಕಳೆದ ವರ್ಷದ ‘ಪ್ರಾಣ ಪ್ರತಿಷ್ಠಾ’ ಕಾರ್ಯಕ್ರಮದಂತೆಯೇ ಕಾರ್ಯಕ್ರಮ ಆರಂಭ 
• ‘ಪಂಚಾಮೃತ’ ಮತ್ತು ಸರಯೂ ಜಲದ ಅಭಿಷೇಕವನ್ನು ಒಳಗೊಂಡಂತೆ ಅಭಿಷೇಕ ಸಮಾರಂಭ ಬೆ.10 ಗಂಟೆಗೆ ಶುರು • ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಿಂದ ರಾಮಲಲ್ಲಾಗೆ ಅಭಿಷೇಕ
• ಮಧ್ಯಾಹ್ನ 12.20ಕ್ಕೆ ಪ್ರಾಥಮಿಕ ಆರತಿ  
• ರಾಮಲಲ್ಲಾವನ್ನು ಚಿನ್ನದ ಮತ್ತು ಬೆಳ್ಳಿಯ ಎಳೆಗಳಿಂದ ದೆಹಲಿಯಲ್ಲಿ ತಯಾರಿಸಿದ ವಿಶಿಷ್ಟವಾದ ಪೀತಾಂಬರಿಯಿಂದ ಅಲಂಕಾರ 
• ಬಳಿಕ 3 ದಿನ ಕಾಲ ಮಂಟಪ ಮತ್ತು ಯಜ್ಞಶಾಲೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಹೋಮಗಳು, ಶಾಸ್ತ್ರೀಯ ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ಆಚರಣೆಗಳು ಮತ್ತು ದೈನಂದಿನ ರಾಮಕಥಾ ಪ್ರವಚನಗಳು ಏರ್ಪಾಡು 
• 110 ಗಣ್ಯರು, ಜನಸಾಮಾನ್ಯರು ಸೇರಿ 5000 ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ನೀಡಲಾಗಿದೆ.

- Advertisement -

Latest News

error: Content is protected !!