Thursday, May 16, 2024
Homeತಾಜಾ ಸುದ್ದಿಮಹಿಳೆಯರಿಗೆ ರಕ್ಷಾ ಬಂಧನಕ್ಕೆ ರಾಜಸ್ಥಾನ ಸರ್ಕಾರ ನೀಡಿದ ಸೂಪರ್ ಗಿಫ್ಟ್ ಹೇಗಿದೆ ನೋಡಿ...

ಮಹಿಳೆಯರಿಗೆ ರಕ್ಷಾ ಬಂಧನಕ್ಕೆ ರಾಜಸ್ಥಾನ ಸರ್ಕಾರ ನೀಡಿದ ಸೂಪರ್ ಗಿಫ್ಟ್ ಹೇಗಿದೆ ನೋಡಿ…

spot_img
- Advertisement -
- Advertisement -

ರಾಜಸ್ಥಾನ : ಎಲ್ಲೆಡೆ ವ್ಯಾಪಿಸಿರುವ ಕರೊನಾ ಸಂಕಷ್ಟ, ರಾಜಕೀಯ ಬಿಕ್ಕಟ್ಟಿನ ನಡುವೆಯೂ ಮಹಿಳೆಯರಿಗಾಗಿ ವಿಶೇಷ ಉಡುಗೊರೆಯೊಂದನ್ನು ರಾಜಸ್ಥಾನ ಸರ್ಕಾರ ಘೋಷಿಸಿದೆ.

ರಕ್ಷಾ ಬಂಧನ ದಿನದಂದು ಮಹಿಳೆಯರು ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಸಂಚರಿಸಬಹುದು. ರಾಜ್ಯಾದ್ಯಂತ ಸಂಚರಿಸುವ ಬಸ್​ಗಳಲ್ಲಿ ಈ ಸೌಲಭ್ಯ ಪಡೆಯಬಹುದು ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಘೋಷಿಸಿದ್ದಾರೆ.

ಆದರೆ, ಈ ಸೌಲಭ್ಯ ಹವಾನಿಯಂತ್ರಿತ, ವೋಲ್ವೋ ಹಾಗೂ ಆಲ್​ ಇಂಡಿಯಾ ಪರ್ಮಿಟ್​ ಪಡೆದಿರುವ ಬಸ್​ಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ರಾಜ್ಯದ ಒಳಗೆ ಎಲ್ಲಿ ಬೇಕಾದರೂ ಸಂಚರಿಸಬಹುದು ಎಂದು ಸರ್ಕಾರ ಹರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಕ್ಷಾ ಬಂಧನ ದಿನಂದು ಸಂಚರಿಸುವ ಮಹಿಳೆಯರ ಟಿಕೆಟ್​ ಶುಲ್ಕವನ್ನು ಸರ್ಕಾರದಿಂದ ಭರಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಸಾರಿಗೆ ಸಂಸ್ಥೆ ಮಾಹಿತಿ ನೀಡಿದೆ.

- Advertisement -
spot_img

Latest News

error: Content is protected !!