Wednesday, May 1, 2024
Homeಕರಾವಳಿಸಂಪ್ಯ: ಕೊರೋನಾಗೆ ಆಮಂತ್ರಣ ನೀಡುತ್ತಿರುವ ರಸ್ತೆ ಬದಿಯ ತ್ಯಾಜ್ಯ ವಸ್ತುಗಳ ರಾಶಿ

ಸಂಪ್ಯ: ಕೊರೋನಾಗೆ ಆಮಂತ್ರಣ ನೀಡುತ್ತಿರುವ ರಸ್ತೆ ಬದಿಯ ತ್ಯಾಜ್ಯ ವಸ್ತುಗಳ ರಾಶಿ

spot_img
- Advertisement -
- Advertisement -

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶವಾದ ಸಂಪ್ಯ ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕಿದ್ದು, ಗಬ್ಬುವಾಸನೆಗಳಿಂದ ನಾರುತ್ತಿದೆ.

ಆಸುಪಾಸಿನ ಜನರು ರಸ್ತೆ ಇಲ್ಲಿಯ ಬದಿಯಲ್ಲಿ ತ್ಯಾಜ್ಯವಸ್ತುಗಳನ್ನು ಬಿಸಾಡುತ್ತಿದ್ದು, ಇದು ಗಬ್ಬುವಾಸನೆಗೆ ಕಾರಣವಾಗಿದೆ. ರಸ್ತೆ ಬದಿಯಲ್ಲಿ ದೊಡ್ಡ ಗೋಣಿ ಚೀಲಗಳು ಸೇರಿದಂತೆ ಪ್ಲಾಸ್ಟಿಕ್ ಗಳು ಬಿದ್ದಿವೆ. ಕೊರೋನಾ ಸಮಯದಲ್ಲಿ ಜನರು ಆದಷ್ಟು ಸ್ವಚ್ಚತೆಗೆ ಆಧ್ಯತೆ ಕೊಡಬೇಕಾಗಿದೆ.

ಆದರೂ ಸಾರ್ವಜನಿಕರು ಇದನ್ನು ಪಾಲಸದೆ ಈ ರೀತಿಯ ಬೇಜಾವಾಬ್ದಾರಿತನ ಮಾಡುತ್ತಿರುವುದು ಸರಿಯಲ್ಲ ಎಂದು ಆರ್ಯಾಪು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಅನುಷಾ. ಡಿ ತಿಳಿಸಿದ್ದಾರೆ.

ಈ ಬಗ್ಗೆ ಅನೇಕ ಭಾರಿ ಸಾರ್ವಜನಿಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನು ಮುಂದೆ ಗಲೀಜುಗಳನ್ನು, ಕಸಗಳನ್ನು ತಂದು ರಸ್ತೆ ಬದಿ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!