Saturday, May 11, 2024
Homeಕರಾವಳಿಪುತ್ತೂರು :ಪುತ್ತಿಲ ಪರಿವಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಹಿರಂಗ; ಪುತ್ತಿಲ ಪರಿವಾರದ ಸಹವಾಸವೇ ಬೇಡ ಎಂದು...

ಪುತ್ತೂರು :ಪುತ್ತಿಲ ಪರಿವಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಹಿರಂಗ; ಪುತ್ತಿಲ ಪರಿವಾರದ ಸಹವಾಸವೇ ಬೇಡ ಎಂದು ಹೊರ ನಡೆದ ರಾಜರಾಮ್ ಭಟ್

spot_img
- Advertisement -
- Advertisement -

ಪುತ್ತೂರು :ಪುತ್ತಿಲ ಪರಿವಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಗುಸುಗುಸು ಪಿಸು ಪಿಸು ಬಹಳ ಹಿಂದಿನಿಂದಲೂ ಕೇಳಿ ಬರುತ್ತಲೇ ಇತ್ತು. ಇದೀಗ ಅದು ಬಹಿರಂಗವಾಗಿದೆ. ಪುತ್ತಿಲ ಪರಿವಾರದ ಸಹವಾಸವೇ ಬೇಡ ಎಂದು ಪರಿವಾರದ ಮುಖಂಡರಾಗಿದ್ದ ರಾಜರಾಮ್ ಭಟ್ ಹೊರ ನಡೆದಿದ್ದಾರೆ. ಅಲ್ಲದೇ ರಾದಕೀಯ ನಿವೃತ್ತಿ ಘೋಷಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದೆ, ಕಾಯಾ ವಾಚಾ ಮನಸಾ ಪರಿವಾರದ ಕೆಲಸ ಮಾಡಿದ್ದೇನೆ. ಎಲ್ಲಾ ಸಭೆ ಸಮಾರಂಭಗಳಿಗೆ ಸಹಾಯ ಮಾಡಿದ್ದೇನೆ. ರಾಜಕೀಯ ಮಾಡಬೇಕು ಎನ್ನುವ ಉದ್ಧೇಶಕ್ಕೆ ನಾನು ಪರಿವಾರಕ್ಕೆ ಬಂದಿಲ್ಲ. ಮಾತೃ ಪಕ್ಷ ಬಿಜೆಪಿಯಲ್ಲಿ ವ್ಯವಸ್ಥೆ ಸರಿಯಿಲ್ಲ, ಸರಿಮಾಡಬೇಕು ಎನ್ನುವ ಕಾರಣಕ್ಕೆ ಪರಿವಾರಕ್ಕೆ ಬಂದೆ. ಆ ಮೂಲಕ ಮತದಾರರಿಗೆ ನ್ಯಾಯ ಸಿಗಬೇಕು ಎಂದು ಪರಿವಾರ ಸಂಘಟನೆ ರಚನೆಯಾಯಿತು. ಅದರಲ್ಲಿ ಎಷ್ಟೋ ಜನರ ಹಿತ್ತಾಳೆ ಬುದ್ಧಿತನ ನಮಗೆ ಕಂಡು ಬಂತು. ದೊಡ್ಡ ನಾಯಕರ ದರಿದ್ರ ಮಾನಸಿಕತೆ ಕಂಡು ಬಂತು. ಆದರೆ ಪರಿವಾರದ ಒಳಗೆ ಇಳಿದ ನಂತರ ನಮಗೆ ಗೊತ್ತಾಯಿತು ರಾಜಕೀಯ ಇಷ್ಟು ಹೊಲಸಾ ಎಂದು. ನಾನು ಯಾವುದೇ ನನ್ನ ಸ್ವಾರ್ಥ ಲಾಭಲ್ಕಾಗಿ ಈ ವ್ಯವಸ್ಥೆಯೊಳಗೆ ಗುರುತಿಸಿಕೊಂಡವನಲ್ಲ ಆ ಕಾರಣಕ್ಕೆ ನಾನು ಎಲ್ಲಾ ಸಂಘಟನೆ,ಪರಿವಾರ, ಸಕ್ರೀಯ ರಾಜಕಾರಣದಿಂದ ಸಂಪೂರ್ಣ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಇವತ್ತಿನಿಂದ ನಾನು ಸ್ವತಂತ್ರ ಮತದಾರ,ನಾನು ಯಾವ ಪರಿವಾರದ, ಸಂಘಟನೆಯ ವಕ್ತಾರನಲ್ಲ. ನಾನು ಇನ್ನು ಮುಂದೆ ಪುತ್ತಿಲ ಪರಿವಾರದ ಸದಸ್ಯನಾಗಿರುವುದಿಲ್ಲತನು-ಮನ-ಧನದಿಂದ ನಾನು ಪರಿವಾರಕ್ಕೆ ಧಾರೆ ಎರೆದಿದ್ದೇನೆ. ವೈಯುಕ್ತಿಕ ಕಾರಣಕ್ಕಾಗಿ ಈ ನಿರ್ಧಾರ ಎಂದು ಹೇಳುವ ಮೂಲಕ ರಾಜಾರಾಮ್ ಭಟ್ ಪರಿವಾರದಿಂದ ಹೊರನಡೆದು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

- Advertisement -
spot_img

Latest News

error: Content is protected !!