- Advertisement -
- Advertisement -
ಉಡುಪಿ: ಆಂಬ್ಯುಲೆನ್ಸ್ ನಲ್ಲಿ ಹೆಚ್ಚು ಹಣ ಕೇಳಿದ ಕಾರಣಕ್ಕೆ ಟೂರಿಸ್ಟ್ ಕಾರಿನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋಗಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.
ಸ್ವಿಫ್ಟ್ ಡಿಜೈರ್ ಕಾರಿನ ಡಿಕ್ಕಿಯಲ್ಲಿ ಮೃತದೇಹ ಇರಿಸಿಕೊಂಡು ಹೋಗುತ್ತಿದ್ದ ವೇಳೆ ಶಿರೂರು ಟೋಲ್ ಗೇಟ್ ಬಳಿ ಬೆಳಕಿಗೆ ಬಂದಿದೆ.
ಶಿರೂರು ಟೋಲ್ ಗೇಟ್ ಬಳಿ ಕಾರು ತಡೆದು ನಿಲ್ಲಿಸಿದ ಆ್ಯಂಬ್ಯುಲೆನ್ಸ್ ಡ್ರೈವರ್, ಮೃತದೇಹ ಕೊಂಡೊಯ್ಯುತ್ತಿದ್ದ ಕಾರಿನ ಚಾಲಕನಿಗೆ ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡಿದ್ದಾನೆ ಎನ್ನಲಾಗಿದೆ.
ಆ್ಯಂಬ್ಯುಲೆನ್ಸ್ ನಲ್ಲಿ ಜಾಸ್ತಿ ಹಣ ಕೇಳಿದ್ದಕ್ಕಾಗಿ ಕಾರಿನಲ್ಲಿ ಮೃತದೇಹ ಸಾಗಿಸುತ್ತಿರುವುದಾಗಿ ಸ್ಥಳೀಯರ ಮುಂದೆ ಮೃತದೇಹದ ವಾರೀಸುದಾರರಿಂದ ಹೇಳಿಕೆ ವ್ಯಕ್ತವಾಗಿದೆ.
ಉಡುಪಿಯಿಂದ ಉತ್ತರ ಕನ್ನಡ ಜಿಲ್ಲೆಯ ಕಡೆಗೆ ಕಾರು ತೆರಳುತ್ತಿದ್ದು, ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
- Advertisement -