Friday, May 24, 2024
Homeಕರಾವಳಿಬೆಳ್ತಂಗಡಿ: ಸರಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರಿಗೆ ಕಿಟ್ ವಿತರಿಸಿದ ರಾಜಕೇಸರಿ ಸಂಘಟನೆ

ಬೆಳ್ತಂಗಡಿ: ಸರಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರಿಗೆ ಕಿಟ್ ವಿತರಿಸಿದ ರಾಜಕೇಸರಿ ಸಂಘಟನೆ

spot_img
- Advertisement -
- Advertisement -

ಬೆಳ್ತಂಗಡಿ: ಸತತ 7 ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯವನ್ನು ಮಾಡುತ್ತಿರುವ ಜಿಲ್ಲೆಯ ರಾಜಕೇಸರಿ ಬಳಗದಿಂದ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯ ಗುತ್ತಿಗೆ ನೌಕರರಿಗೆ 60 ಕಿಟ್ ವಿತರಣೆ ಮಾಡಲಾಯಿತು.

ಕೋರೋನ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಪೈಕಿ ಸರಕಾರದ ಯಾವುದೇ ಸೌಲಭ್ಯಗಳು ಇಲ್ಲದೆ ಎನ್.ಎಚ್.ಎಂ.ಯೋಜನೆಯ ಅಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಶ್ರಮವನ್ನು ವಿಶೇಷವಾಗಿ ಗುರುತಿಸಿ ಅವರಿಗೆ ರಾಜಕೇಸರಿ ಸಂಘಟನೆ ಸಹಾಯ ಹಸ್ತ ಚಾಚಿದೆ.
.
ಈ ಸಂದರ್ಭದಲ್ಲಿ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷರಾದ ಅಶ್ರಫ್ ಆಲಿ ಕುಂಞಿ ,ತಾಲೂಕು ಆರೋಗ್ಯ ಅಧಿಕಾರಿ ಕಲಾಮಧು ಶೆಟ್ಟಿ,ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಸಿಸ್ಟರ್ ಅಮ್ಮಿ, ಗುತ್ತಿಗೆ ನೌಕರ ಸಂಘದ ತಾಲೂಕು ಸಂಚಾಲಕ ಅಜಯ್. ಕೆ.ಎ, ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್.ಜಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ಜಿಲ್ಲಾ ಸಂಚಾಲಕ ಲೋಕೇಶ್ ಸಬರಬೈಲ್, ಜಿಲ್ಲಾ ಗೌರವ ಅಧ್ಯಕ್ಷ ಅರ್ಪಣ್ ಶೆಟ್ಟಿ ಪೂಂಜಶ್ರೀ, ತಾಲೂಕು ಸಂಚಾಲಕ ಪ್ರವೀಣ್ ಎಂ ಕುಲಾಲ್, ಉಜಿರೆ ಅಧ್ಯಕ್ಷ ಪ್ರವೀಣ್, ಸಂಚಾಲಕ ಕಾರ್ತಿಕ್ ಗೌಡ, ಹುನ್ಸಕಟ್ಟೆ ರಾಜಕೇಸರಿ ಘಟಕದ ಅಧ್ಯಕ್ಷ ಅನಿಲ್, ಸದಸ್ಯರುಗಳಾದ ಪ್ರಸನ್ನ, ಸುರೇಂದ್ರ ಕೋಟ್ಯಾನ್, ಸಂಪತ್, ಸಂದೇಶ್, ಶ್ರವಣ್, ಗಣೇಶ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!