- Advertisement -
- Advertisement -
ಧರ್ಮಸ್ಥಳ: ಕೊರೋನಾ ಮಹಾಮಾರಿ ವೈರಸ್ ಹಬ್ಬುತ್ತಿರುವ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಇದ್ದು ರಾಜ್ಯದಲ್ಲಿ ಮೇ.3ರ ಬಳಿಕ ಲಾಕ್ ಡೌನ್ ಮುಂದುವರಿಸಬೇಕೇ ಅಥವಾ ಬೇಡವೋ ಎಂಬುದರ ಬಗ್ಗೆ ಏಪ್ರಿಲ್ 27ರಂದು ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಮಾತನಾಡಿದ ಗೃಹಸಚಿವರು, ಕೊರೊನಾ ಬಗ್ಗೆ ಜನರು ಜಾಗೃತರಾಗಿರಬೇಕು. ಈ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗಿದೆ. ಹಾಗೆಯೇ ಸರ್ಕಾರದ ಆದೇಶಗಳನ್ನ ಪಾಲಿಸಬೇಕು. ಕೊರೊನಾ ನಿಯಂತ್ರಣ ಮಾಡುವುದು ಜನರ ಕೈಯಲ್ಲಿದೆ. ಮನೆಯಲ್ಲೇ ಇದ್ದು ಲಾಕ್ ಡೌನ್ ಪಾಲಿಸಬೇಕು ಎಂದು ಹೇಳಿದರು.
- Advertisement -