Friday, June 5, 2026
Homeಕರಾವಳಿಕಾಸರಗೋಡಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಶಂಕೆ: ರೈಲ್ವೆ ಹಳಿಗಳ ಮೇಲೆ  ಕಬ್ಬಿಣದ ಸರಳುಗಳು ಹಾಗೂ ಕಾಂಕ್ರೀಟ್...

ಕಾಸರಗೋಡಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ಶಂಕೆ: ರೈಲ್ವೆ ಹಳಿಗಳ ಮೇಲೆ  ಕಬ್ಬಿಣದ ಸರಳುಗಳು ಹಾಗೂ ಕಾಂಕ್ರೀಟ್ ತುಂಡುಗಳು‌ ಪತ್ತೆ

- Advertisement -
- Advertisement -

ಕಾಸರಗೋಡು: ಇಲ್ಲಿನ ಕೋಟಿಕುಳಂ-ಬೇಕಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು ಹಾಗೂ ಕಾಂಕ್ರೀಟ್ ತುಂಡುಗಳು‌ ಪತ್ತೆಯಾಗಿವೆ.

ಇದು ದುಷ್ಕರ್ಮಿಗಳು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 21 ರಂದು ಕಾಸರಗೋಡಿನ ಕೋಟಿಕುಳಂ-ಬೇಕಳ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ಕಬ್ಬಿಣದ ಸರಳುಗಳು, ಕಾಂಕ್ರೀಟ್ ಇಟ್ಟು ರೈಲು ಹಳಿಗಳನ್ನು ತುಂಡು ಮಾಡಲು ಯತ್ನಿಸಿದ್ದಾರೆ. ಆದರೆ ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಹಳಿ ಮೇಲೆ 35 ಕೆಜಿ ಕಾಂಕ್ರೀಟ್ ತುಂಡು ಪತ್ತೆಯಾಗಿದೆ.

ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರವೂ ಇಂತಹುದೇ ಕೃತ್ಯ ನಡೆದಿದ್ದು, ಚಿತ್ತಾರಿ ಎಂಬಲ್ಲಿ ಕೊಯಂಬತ್ತೂರು ಮಂಗಳೂರು ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದರು.

- Advertisement -

Latest News

error: Content is protected !!