Thursday, June 25, 2026
Homeಅಪರಾಧಮಂಗಳೂರು: ಕೋಳಿ ಅಂಕದ ಮಧ್ಯೆಯೇ ರೌಡಿ ಶೀಟರ್ ನ ಬರ್ಬರ ಹತ್ಯೆ, ದುಷ್ಕರ್ಮಿಗಳು ಪರಾರಿ

ಮಂಗಳೂರು: ಕೋಳಿ ಅಂಕದ ಮಧ್ಯೆಯೇ ರೌಡಿ ಶೀಟರ್ ನ ಬರ್ಬರ ಹತ್ಯೆ, ದುಷ್ಕರ್ಮಿಗಳು ಪರಾರಿ

- Advertisement -
- Advertisement -

ಮಂಗಳೂರಿನ‌ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ಯುವಕನನ್ನು ತಂಡವೊಂದು ಕೊಲೆಗೈದ ಘಟನೆ ಇಂದು ಸಂಜೆ ನಡೆದಿದೆ. ನಗರದ ಹೊಯಿಗೆ ಬಝಾರ್ ನಿವಾಸಿಯಾಗಿದ್ದ ರಾಹುಲ್ ಅಲಿಯಾಸ್ ಕಕ್ಕೆ ರಾಹುಲ್(26) ಕೊಲೆಯಾದ ರೌಡಿಶೀಟರ್.

ನಾಲ್ಕು ಮಂದಿ ದುಷ್ಕರ್ಮಿಗಳು ಪೂರ್ವದ್ವೇಷದ ಹಿನ್ನೆಲೆಯಲ್ಲಿ ಚಾಕು, ಬಾಟಲಿಯಲ್ಲಿ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ವೆನ್ಲಾಕ್ ಆಸ್ಪತ್ರೆಯ ಶವಗಾರಕ್ಕೆ ಮೃತದೇಹ ರವಾನೆಯಾಗಿದ್ದು, ಆಸ್ಪತ್ರೆಗೆ ‌ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ‌ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯ ಕುರಿತು ಪಾಂಡೇಶ್ವರ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!