Thursday, June 4, 2026
Homeತಾಜಾ ಸುದ್ದಿಮುಹೂರ್ತಕ್ಕೆ ಸಮಯವಾದರೂ ಮಂಟಪಕ್ಕೆ ಬಾರದ ವರ : ಮಗಳಿಗೆ ಬೇರೊಬ್ಬನೊಂದಿಗೆ ಅಲ್ಲೇ ಮದುವೆ ಮಾಡಿಸಿದ ವಧುವಿನ ತಂದೆ

ಮುಹೂರ್ತಕ್ಕೆ ಸಮಯವಾದರೂ ಮಂಟಪಕ್ಕೆ ಬಾರದ ವರ : ಮಗಳಿಗೆ ಬೇರೊಬ್ಬನೊಂದಿಗೆ ಅಲ್ಲೇ ಮದುವೆ ಮಾಡಿಸಿದ ವಧುವಿನ ತಂದೆ

- Advertisement -
- Advertisement -

ಮಹರಾಷ್ಟ್ರ : ಮುಹೂರ್ತಕ್ಕೆ ಸಮಯವಾದರೂ ಮಂಟಪಕ್ಕೆ ವರ ಬಾರದ ಹಿನ್ನೆಲೆ ಮಗಳಿಗೆ ಬೇರೊಬ್ಬನೊಂದಿಗೆ ವಧುವಿನ ತಂದೆ ಅಲ್ಲೇ ಮದುವೆ ಮಾಡಿಸಿದ ಘಟಮೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್ ಪಾಂಗ್ರಾ ಗ್ರಾಮದಲ್ಲಿ ನಡೆದಿದೆ.

ಮದುವೆಗಾಗಿ ಸಕಲ ಸಿದ್ಧತೆಗಳು ನಡೆದಿತ್ತು. ಏಪ್ರಿಲ್ 22ರ ಸಂಜೆ 4 ಗಂಟೆಗೆ ಮದುವೆ ಸಮಾರಂಭಕ್ಕೆ ಶುಭ ಮುಹೂರ್ತ ಇಡಲಾಗಿತ್ತು. ವಧು ಮತ್ತು ಆಕೆಯ ಕುಟುಂಬದವರು ಮಂಟಪಕ್ಕೆ ಬಂದು ಕಾಯುತ್ತಿದ್ದರು. ಆದರೆ ಅವರು ಸಂಜೆ 8 ಗಂಟೆಯಾದರೂ ವರ ಮಂಟಪಕ್ಕೆ ಬಂದಿಲ್ಲ. ವರ ಮತ್ತು ಆತನ ಸ್ನೇಹಿತರು ಪಾರ್ಟಿಯಲ್ಲಿ ಮುಳುಗಿದ್ದರು ಎನ್ನಲಾಗಿದೆ.

ರಾತ್ರಿ 8 ಗಂಟೆಗೆ ಮಂಟಪಕ್ಕೆ ಬಂದ ವರ ಬಳಿಕ ಜಗಳವಾಡಿದ್ದಾನೆ. ಇದರಿಂದ ಕೆರಳಿದ ವಧುವಿನ ತಂದೆ ನಾವು ನಮ್ಮ ಸಂಬಂಧಿಕರೊಬ್ಬರೊಂದಿಗೆ ನನ್ನ ಮಗಳನ್ನು ಮದುವೆ ಮಾಡಿ ಕೊಡುತ್ತೇವೆ ಎಂದು ಹೇಳಿ ವಿವಾಹ ನೆರವೇರಿಸಿದ್ದಾರೆ. ಕೊನೆಗೆ ವರನ ಕಡೆಯವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸ್ ತೆರಳಿದ್ದಾರೆ.

- Advertisement -

Latest News

error: Content is protected !!