Tuesday, May 7, 2024
Homeಮನರಂಜನೆನಿನ್ನೆ ರಾತ್ರಿ ರಾಗಿಣಿಗೆ ಮತ್ತೆ ಕಾಣಿಸಿಕೊಂಡ ಬೆನ್ನುನೋವು: ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಗೋಗರೆದ ನಟಿ

ನಿನ್ನೆ ರಾತ್ರಿ ರಾಗಿಣಿಗೆ ಮತ್ತೆ ಕಾಣಿಸಿಕೊಂಡ ಬೆನ್ನುನೋವು: ಖಾಸಗಿ ಆಸ್ಪತ್ರೆಗೆ ಸೇರಿಸಿ ಎಂದು ಗೋಗರೆದ ನಟಿ

spot_img
- Advertisement -
- Advertisement -

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ನಟಿ ರಾಗಿಣಿ ಅವರಿಗೆ ಮತ್ತೆ ಬೆನ್ನುನೋವು ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ತೀವ್ರ ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ರಾಗಿಣಿಗೆಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ನಿನ್ನೆ ರಾತ್ರಿ ತೀವ್ರ ಬೆನ್ನು ನೋವಿದೆ ಎಂದು ರಾಗಿಣಿ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಅಲ್ಲದೆ ತುರ್ತಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ, ಆಗುತ್ತಿಲ್ಲ ಎಂದು ಗೋಳಾಡಿದ್ದಾರೆ. ನಂತರ ಜೈಲಿನ ಆಸ್ಪತ್ರೆಗೆ ಸೇರಿಸಲಾಗಿದ್ದು, ರಾತ್ರಿ ಪೂರ್ತಿ ಚಿಕಿತ್ಸೆ ಪಡೆದಿದ್ದಾರೆ. ರಾಗಿಣಿ ಗೋಳಾಟ ತಾಳಲಾರದೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


ಇನ್ನು ಕಳೆದ ಮೂರು ದಿನಗಳ ಹಿಂದೆಯಷ್ಟೇ ಆರೋಗ್ಯದ ಸಮಸ್ಯೆ ಎಂದು ರಾಗಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಹೆಚ್ಚು ಬೆನ್ನು ನೋವು ಎಂದು ಜೈಲು ಆಸ್ಪತ್ರೆಯಲ್ಲಿ ರಾತ್ರಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ನನಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

- Advertisement -
spot_img

Latest News

error: Content is protected !!