Sunday, May 19, 2024
Homeತಾಜಾ ಸುದ್ದಿತನಿಷ್ಕ್ಆ್ಯಡ್ ನಲ್ಲಿ ಲವ್ ಜಿಹಾದ್ ಗೆ ಉತ್ತೇಜನ ಆರೋಪ- ಇದು ಸೃಜನಶೀಲತೆಗೆ ಧಕ್ಕೆ ಎಂದ ಅತ್ಯುನ್ನತ...

ತನಿಷ್ಕ್ಆ್ಯಡ್ ನಲ್ಲಿ ಲವ್ ಜಿಹಾದ್ ಗೆ ಉತ್ತೇಜನ ಆರೋಪ- ಇದು ಸೃಜನಶೀಲತೆಗೆ ಧಕ್ಕೆ ಎಂದ ಅತ್ಯುನ್ನತ ಜಾಹೀರಾತು ಕಂಪನಿಗಳು!..

spot_img
- Advertisement -
- Advertisement -

ನವದೆಹಲಿ: ತನಿಷ್ಕ್ ನಿರ್ಮಾಣ ಮಾಡಿರುವ ಸೀಮಂತದ ಜಾಹೀರಾತು ಸಾಕಷ್ಟು ಸದ್ದು ಮಾಡಿದ್ದು ಟೀಕೆಗೆ ಗುರಿಯಾಗಿತ್ತು. ಆದರೆ ಈ ಜಾಹಿರಾತು ಅಸಭ್ಯ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವಂಥದ್ದು ಏನನ್ನೂ ಅಭಿವ್ಯಕ್ತ ಪಡಿಸಿಲ್ಲ. ಇಲ್ಲಿನ ಮುಕ್ತ ಸೃಜನಶೀಲ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಅವಕಾಶ ನೀಡಲಾಗಿದೆ ಎಂದು ದೇಶದ ಅತ್ಯುನ್ನತ ಜಾಹೀರಾತು ಸಂಸ್ಥೆಗಳು ‘ತನಿಷ್ಕ್‌’ಗೆ ಬೆಂಬಲ ಸೂಚಿಸಿವೆ.

‘ತನಿಷ್ಕ್ ರೂಪಿಸಿದ್ದ ಜಾಹೀರಾತು ಒಂದು ಕೋಮನ್ನು ಓಲೈಸುವಂತಿದೆ,ಜಾಹೀರಾತು ‘ಲವ್ ಜಿಹಾದ್‌ಗೆ ಉತ್ತೇಜನ ನೀಡುವಂತಿದೆ’ ಎಂದು ಕೆಲವರು ಹರಿಹಾಯ್ದಿದ್ದರು. ಎಂಬ ವರದಿಯಿಂದ ತನಿಷ್ಕ್ ಜಾಹೀರಾತು ಹಿಂಪಡೆದಿತ್ತು.ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟ್ರೋಲಿಂಗ್ ನಡೆದಿತ್ತು. ಕೆಲ ಸಿಬ್ಬಂದಿ ಜೀವಬೆದರಿಕೆಯನ್ನೂ ಎದುರಿಸಿದ್ದರು ಎನ್ನಲಾಗಿದೆ.

ಭಾರತೀಯ ಮಾಧ್ಯಮ ಮತ್ತು ಜಾಹೀರಾತು ಉದ್ಯಮದ ಪರವಾಗಿ ಹೇಳಿಕೆ ನೀಡಿರುವ ‘ದಿ ಅಡ್ವರ್ಟೈಸಿಂಗ್ ಕ್ಲಬ್’, ಉದ್ಯೋಗಿಗಳಿಗೆ ಬೆದರಿಕೆ ಹಾಕಿರುವುದನ್ನು ಖಂಡಿಸಿದೆ. ಜಾಹೀರಾತು ಹಿಂಪಡೆಯುವಂತೆ ಮಾಡಿದ ಒತ್ತಾಯವನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿರುವ ಇಂಟರ್‌ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಷನ್, ‘ಬೆದರಿಕೆ ಹಾಕಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದೆ.

- Advertisement -
spot_img

Latest News

error: Content is protected !!