Sunday, May 5, 2024
Homeತಾಜಾ ಸುದ್ದಿಚಂದನವನದಲ್ಲಿ ಡ್ರಗ್ಸ್ ದಂಧೆ: ಬಂಧಿತ ರವಿಶಂಕರ್​ ಜೊತೆ ರಾಗಿಣಿಗೆ ವಿವಾಹವಾಗಿದ್ಯಾ ?

ಚಂದನವನದಲ್ಲಿ ಡ್ರಗ್ಸ್ ದಂಧೆ: ಬಂಧಿತ ರವಿಶಂಕರ್​ ಜೊತೆ ರಾಗಿಣಿಗೆ ವಿವಾಹವಾಗಿದ್ಯಾ ?

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯವ್ರ ಗೆಳೆಯ ರವಿಶಂಕರ್‌ ಅವರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ನಟಿ ರಾಗಿಣಿ ಒಬ್ಬ ಆರ್ ಟಿಓ ಪೊಲೀಸ್ ಅಧಿಕಾರಿ ಜೊತೆ ಯುಬಿ ಸಿಟಿಯಲ್ಲಿ ಓಡಾಡುತ್ತಿದ್ದಳು, ಮದುವೆಯಾಗುವುದಾಗಿಯೂ ಹೇಳಿದ್ದಳು. ಹೌದಾ..? ಒಳ್ಳೆಯದಾಗಲಿ ಎಂದು ನಾನು ಹಾರೈಸಿದ್ದೆ ಅಷ್ಟೇ. ಆದರೆ ಇಂಥ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ ಎಂದು ನಮಗೆ ತಿಳಿದಿರಲಿಲ್ಲ ಎಂದು ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ಸತ್ಯ ಬಾಯ್ಬಿಟ್ಟ ರವಿಶಂಕರ್
ವಿಚಾರಣೆ ವೇಳೆ ರವಿಶಂಕರ್ ರಾಗಿಣಿ ಜತೆಗಿನ ಸಂಪರ್ಕ ಬಾಯ್ಬಿಟ್ಟಿದ್ದಾರೆ. ನಾಲ್ಕು ವರ್ಷದಿಂದ ತನಗೆ ರಾಗಿಣಿ ಜತೆ ಸಂಪರ್ಕ ಇದೆ ಎಂದು ಅವರು ತಿಳಿಸಿದ್ದಾರೆ. ರಾಗಿಣಿ ಜತೆ ತಾನು ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದೆ. ಪತ್ನಿಗೆ ಡೈವೋರ್ಸ್ ನೀಡಿದ ಬಳಿಕ ರಾಗಿಣಿ ಜೊತೆ ಸಹಜೀವನ ನಡೆಸುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ. ರವಿಶಂಕರ್ ಗೆ ಎಂಟು ವರ್ಷದ ಮಗಳಿದ್ದಾಳೆ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಈ ರವಿಶಂಕರ್ ಯಾರು?
ರವಿಶಂಕರ್ ಮೂಲತಃ ಬೆಂಗಳೂರಿನ ಲ್ಯಾವೆಲ್ಲಿ ರೋಡ್ ನಿವಾಸಿ. ಈತ ಸೆಕೆಂಡ್ ಡಿವಿಶನ್ ಕ್ಲರ್ಕ್​ ಆಗಿ ​ ಜಯನಗರ ಆರ್​​ಟಿಒ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ. ನಟಿ ರಾಗಿಣಿಯ ಅತ್ಯಪ್ತ ಅಂತಾನೇ ಹೇಳಿಕೊಳ್ತಿರುವ ಈತನ ಜೊತೆ ರಾಗಿಣಿ ಹಲವು ವರ್ಷಗಳಿಂದ ಸ್ನೇಹದಲ್ಲಿದ್ದಾರೆ. ಮೊದ ಮೊದಲು ಸ್ನೇಹಿತರಾಗಿದ್ದ ಇವ್ರು ಮುಂದೆ ಮತ್ತಷ್ಟು ಆತ್ಮೀಯರಾದ್ರು ಅಂತಾನೇ ಹೇಳಲಾಗ್ತಿದೆ. ಇನ್ನು ಇವರಿಬ್ಬರು ಜೊತೆಯಾಗಿ ಹಲವು ಕಡೆ ಸುತ್ತಾಡಿದ್ದಾರೆ, ನಗರದ ಸ್ಟಾರ್ ಹೋಟೆಲ್​​ಗಳಲ್ಲಿ ನಡೆಯುವ ಹೈ ಹ್ಯಾಂಡ್ ಪಾರ್ಟಿಯಲ್ಲಿ ಭಾಗಿಯಾಗ್ತಿದ್ರು ಅಂತಾನೇ ಹೇಳಲಾಗ್ತಿದೆ. ಸಧ್ಯ ಈತನ ಪರಿಚಯವೇ ರಾಗಿಣಿ ಕೊರಳಿಗೆ ಡ್ರಗ್ಸ್‌ ನಂಟು ಸುತ್ತಿಕೊಳ್ಳಲು ಕಾರಣವಾಗಿದ್ದು, ಆದಾಗ್ಲೇ ಸಿಸಿಬಿಯಿಂದ ಅವ್ರಿಗೆ ನೋಟಿಸ್‌ ಹೋಗಿದೆ. ಅದ್ರಂತೆ, ಸೋಮವಾರ ಸಿಸಿಬಿ ವಿಚಾರಣೆಗೆ ರಾಗಿಣಿ ಹಾಜರಾಗಲಿದ್ದಾರೆ.

ರಾಗಿಣಿ ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿಶಂಕರ್ 2019ರ ಮಾರ್ಚ್ 16ರಂದು ಖಾಸಗಿ ಹೋಟೆಲ್ ರಿಟ್ಜ್ ಕಾಲ್ರ್ ಟನ್ ನಲ್ಲಿ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದರು. ಅಂದು ಶಿವಪ್ರಕಾಶ್ ಪಾರ್ಟ್ ಮಾಡುತ್ತಿದ್ದರು. ಇದಕ್ಕೆ ರಾಗಿಣಿ ರವಿಶಂಕರ್ ಜೊತೆ ಹೋಗಿದ್ದೆ ಗಲಾಟೆಗೆ ಕಾರಣವಾಗಿತ್ತು.

- Advertisement -
spot_img

Latest News

error: Content is protected !!