Sunday, June 28, 2026
Homeತಾಜಾ ಸುದ್ದಿನಟಿ ರಾಗಿಣಿ ಆಪ್ತ ರವಿಶಂಕರ್​ ಬಂಧನ: ತುಪ್ಪದ ಹುಡುಗಿಗೆ ಶುರುವಾಗಿದೆ ಢವಢವ..

ನಟಿ ರಾಗಿಣಿ ಆಪ್ತ ರವಿಶಂಕರ್​ ಬಂಧನ: ತುಪ್ಪದ ಹುಡುಗಿಗೆ ಶುರುವಾಗಿದೆ ಢವಢವ..

- Advertisement -
- Advertisement -

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್​ ಎಂಬಾತನನ್ನು ಗುರುವಾರ ಬಂಧಿಸಿದ್ದಾರೆ.

ಡ್ರಗ್ಸ್​ ಜಾಲದಲ್ಲಿ ರಾಗಿಣಿ ಹೆಸರು ಕೇಳಿಬಂದಿರುವುದರಿಂದ ಬುಧವಾರ ಅವರ ಆಪ್ತ ರವಿಶಂಕರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೆ, ವಿಚಾರಣೆಗೆ ಹಾಜರಾಗುವಂತೆ ರಾಗಿಣಿಗೆ ನೋಟಿಸ್​ ಸಹ ನೀಡಲಾಗಿತ್ತು. ಆದರೆ, ವಿಚಾರಣೆಗೆ ಗೈರಾಗಿರು ತುಪ್ಪದ ಬೆಡಗಿ ಇದೀಗ ನಾಪತ್ತೆಯಾಗಿದ್ದಾರೆ.

ಇತ್ತ ವಶಕ್ಕೆ ಪಡೆದಿದ್ದ ರವಿಶಂಕರ್​ನನ್ನು ಪೊಲೀಸರು ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಬಂಧನಕ್ಕೆ ಅವಶ್ಯವಿರುವ ಪೇಪರ್ ವರ್ಕ್​ ಮುಗಿಸಿ ಸಿಸಿಬಿ ವಶಕ್ಕೆ ಪಡೆದಿದ್ದು, ಆರೋಪಿಯನ್ನು ವಿಡಿಯೋ ಕಾನ್ಪರೆನ್ಸ್ ಮುಖಾಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಆರೋಪಿಯ ಮತ್ತಷ್ಟು ವಿಚಾರಣೆ ಅಗತ್ಯ ಇರುವುದರಿಂದ ಮತ್ತೆ ಕಸ್ಟಡಿಗೆ ಸಿಸಿಬಿ ತೆಗೆದುಕೊಳ್ಳಲಿದೆ. ಇನ್ನು ರಾಗಿಣಿ ಅವರು ಇಂದು ಹಾಜರಾಗದೇ ಇರುವ ಕಾರಣ ಇಂದು ಮತ್ತೊಂದು ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಇಂದ್ರಜಿತ್ ಲಂಕೇಶ್ ನೀಡದ ಹೇಳಿಕೆ ಆಧರಿಸಿ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!