Friday, June 5, 2026
Homeಕರಾವಳಿಕಾಸರಗೋಡುಕಾಸರಗೋಡು; ವಿದ್ಯಾರ್ಥಿಗಳ ತಂಡದಿಂದ ರ್ಯಾಗಿಂಗ್ ಆರೋಪ

ಕಾಸರಗೋಡು; ವಿದ್ಯಾರ್ಥಿಗಳ ತಂಡದಿಂದ ರ್ಯಾಗಿಂಗ್ ಆರೋಪ

- Advertisement -
- Advertisement -

ಕಾಸರಗೋಡು; ವಿದ್ಯಾರ್ಥಿಗಳ ತಂಡವೊಂದು ಇನ್ನೋರ್ವ ವಿದ್ಯಾರ್ಥಿಗೆ ರ್ಯಾಗಿಂಗ್ ನಡೆಸಿದ ಆರೋಪ ಕೇಳಿ ಬಂದಿದೆ.

ಪೈವಳಿಕೆಯ ಸರ್ಕಾರಿ ಕಾಲೇಜಿನ ಸೆಕೆಂಡ್ ಪಿಯುಸಿ ವಿದ್ಯಾರ್ಥಯೋರ್ವನ ಮೇಲೆ ಇತರೆ ವಿದ್ಯಾರ್ಥಿಗಳು ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಪೈವಳಿಕೆ ಕಾಯರ್ ಕಟ್ಟೆ ಜಿ.ಎಚ್.ಎಸ್ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಅದ್ನಾನ್ (17) ಹಲ್ಲೆಗೆ ಒಳಗಾದ ವಿದ್ಯಾರ್ಥಿ.ಈತನ ತಲೆ ಮತ್ತು ಹಣೆಗೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ.

ಅದ್ನಾನ್ ಶುಕ್ರವಾರ ತರಗತಿ ಮುಗಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.ಇದೀಗ ಆತನನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ‌.

- Advertisement -

Latest News

error: Content is protected !!