Thursday, June 4, 2026
Homeತಾಜಾ ಸುದ್ದಿತಮಿಳಿನ ಖ್ಯಾತ ಹಾಸ್ಯನಟ ನಿಧನ

ತಮಿಳಿನ ಖ್ಯಾತ ಹಾಸ್ಯನಟ ನಿಧನ

- Advertisement -
- Advertisement -

ಚೆನ್ನೈ : ತಮಿಳು ಹಾಸ್ಯನಟ ಮತ್ತು ನಟ ಮಾಯಿಲ್‌ ಸಾಮಿ(57) ನಿಧನರಾಗಿದ್ದಾರೆ. ಇಂದು  ಮುಂಜಾನೆ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಇವರು 100 ಕ್ಕೂ ಹೆಚ್ಚು ತಮಿಳು ಚಲನಚಿತ್ರಗಳಲ್ಲಿ ಪೋಷಕ ಮತ್ತು ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಮಾಯಿಲ್ಸಾಮಿ ಅವರು ಕಮಲ್ ಹಾಸನ್, ಅಜಿತ್ ಕುಮಾರ್ ಮತ್ತು ವಿಜಯ್ ಅವರಂತಹ ಹಲವು ಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ಇನ್ನು ಕಮಲ್ ಹಾಸನ್ ಅವರು ಮಾಯಿಲ್‌ಸಾಮಿ ಸಂತಾಪ ಸೂಚಿಸಿದ್ದು, ನನ್ನ ಸ್ನೇಹಿತ ಮಾಯಿಲ್‌ಸಾಮಿ ತಮ್ಮದೇ ಶೈಲಿಯ ಹಾಸ್ಯ ನಟನೆಯನ್ನು ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ್ಮೀಯ ಗೆಳೆಯನಿಗೆ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Latest News

error: Content is protected !!