Thursday, June 4, 2026
Homeತಾಜಾ ಸುದ್ದಿಆಲ್ ನೈಲ್ ನಲ್ಲಿ ರಮ್ಮಿ ಆಟದ ಚಟಕ್ಕೆ ಬಿದ್ದು ಯುವಕ ಆತ್ಮಹತ್ಯೆ

ಆಲ್ ನೈಲ್ ನಲ್ಲಿ ರಮ್ಮಿ ಆಟದ ಚಟಕ್ಕೆ ಬಿದ್ದು ಯುವಕ ಆತ್ಮಹತ್ಯೆ

- Advertisement -
- Advertisement -

ತುಮಕೂರು: ಆಲ್ ನೈಲ್ ನಲ್ಲಿ ರಮ್ಮಿ ಆಟದ ಚಟಕ್ಕೆ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ಮಾದಪಟ್ಟಣದಲ್ಲಿ ನಡೆದಿದೆ. ಮಂಜುನಾಥ್  (34) ಆತ್ಮಹತ್ಯೆ ಮಾಡಿಕೊಂಡ ಯುವಕ.

ಮಂಜುನಾಥ್ ರಮ್ಮಿ ಆಟದ ಚಟಕ್ಕೆ ಬಿದ್ದು ಊರೆಲ್ಲಾ ಸಾಲ ಮಾಡಿಕೊಂಡಿದ್ದ. ಈ ನಡುವೆ ಸಾಲಗಾರರು ಹಣಕ್ಕಾಗಿ ಪೀಡಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಸಾಲಗಾರರ ಕಿರುಕುಳಿಂದ ಬೇಸತ್ತು ಮಂಜುನಾಥ್‌ ಶನಿವಾರ ತನ್ನ ಮಾವನ ಮನೆಯಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕಳೆದ ವರ್ಷ ಮದುವೆಯಾಗಿದ್ದ ಎನ್ನಲಾಗಿದ್ದು, ಸದ್ಯ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!