Friday, May 10, 2024
Homeಮನರಂಜನೆಶೀಘ್ರದಲ್ಲೇ ಯಶ್ ಮಗನಿಗೆ ನಾಮಕರಣ, ಏನಂಥ ಹೆಸರಿಡ್ತಾರೆ ಗೊತ್ತಾ?

ಶೀಘ್ರದಲ್ಲೇ ಯಶ್ ಮಗನಿಗೆ ನಾಮಕರಣ, ಏನಂಥ ಹೆಸರಿಡ್ತಾರೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ಈ ಹಿಂದೆ ರಾಧಿಕಾ ಹಾಗೂ ಯಶ್ ಮಗಳಿಗೆ ಏನ್ ಹೆಸರಿಡ್ತಾರೆ ಅನ್ನೋ ವಿಚಾರ ಭಾರೀ ಸದ್ದು ಮಾಡಿತ್ತು. ಕೊನೆಗೆ ಯಶ್ ಹೆಸರು ಹಾಗೂ ರಾಧಿಕಾ ಹೆಸರಿನ ಕೊನೆಯ ಅಕ್ಷರ ಸೇರಿಸಿ ಯಶ್ ದಂಪತಿ ಮಗಳಿ ಐರಾ ಎಂದು ನಾಮಕರಣ ಮಾಡಿದ್ರು. ಇದೀಗ ಮಗನಿಗೆ ಯಾವ ಹೆಸರು ಇಡುತ್ತಾರೆ ಅನ್ನುವ ಕುತೂಹಲ ಅಭಿಮಾನಿಗಳನ್ನು ಕಾಡ್ತಿದೆ.

ಈಗಾಗಲೇ ಯಶ್-ರಾಧಿಕಾ ಮಗನಿಗೆ ಏನು ಹೆಸರು ಇಡುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ಐರಾ ಅಕ್ಷರದ ಮೊದಲ ಹೆಸರು ಆ ಹಾಗೂ ಯಶ್ ಹೆಸರನ್ನು ಸೇರಿಸಿ `ಆಯುಷ್’ ಎಂದು ನಾಮಕರಣ ಮಾಡಲಾಗುತ್ತದೆ ಎನ್ನುವ ಸುದ್ದಿ ಸಹ ಹರಿದಾಡ್ತಿದೆ. ಸದ್ಯ, ರಾಧಿಕಾ ಪಂಡಿತ್ ಈ ಎಲ್ಲ ಸುದ್ದಿಗಳಿಗೆ ತೆರೆ ಎಳೆದಿದ್ದು, ಮಗನಿಗೆ ಆಯುಷ್ ಎಂದು ನಾಮಕರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲ, ಶೀಘ್ರವೇ ಮಗನಿಗೆ ನೂತನ ಹೆಸರನ್ನ ಹುಡುಕಿ ನಾಮಕರಣ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಾಧಿಕಾ ಪಂಡಿತ್, ಎಲ್ಲರೂ ಕೇಳುತ್ತಿರುವ ಪ್ರಶ್ನೆಗೆ ಶೀಘ್ರವೇ ಉತ್ತರ ಸಿಗಲಿದೆ. ಜೂನಿಯರ್ಗೆ ಶೀಘ್ರವೇ ಹೊಸ ಹೆಸರನ್ನಿಡುತ್ತಿದ್ದೇವೆ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

Morning dose of happiness ?Replying to one of the most asked questions..Finally Junior is getting a name soon!! Will keep u guys updated ?

Posted by Radhika Pandit on Sunday, 23 August 2020

- Advertisement -
spot_img

Latest News

error: Content is protected !!