Sunday, June 7, 2026
Homeತಾಜಾ ಸುದ್ದಿಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ

ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿಕೆ

- Advertisement -
- Advertisement -

ನವದೆಹಲಿ: ಎಐಸಿಸಿ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿಯವರನ್ನು ಮುಂದುವರೆಸಲು CWC ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ತಾವು ರಾಜೀನಾಮೆ ನೀಡುವುದಾಗಿ ಸೋನಿಯಾ ಗಾಂಧಿ ಹೇಳಿದರೂ ಒಪ್ಪದ ಸಿಡಬ್ಲ್ಯುಸಿ ಸಭೆ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುವಂತೆ ಮನವಿ ಮಾಡಿದೆ. ಇಂದು ಕಾಂಗ್ರೆಸ್ ವಲಯದಲ್ಲಿ ನಡೆದ ಅನಿರೀಕ್ಷಿತ ಬೆಳವಣಿಗೆ ನಡುವೆಯೂ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಗಾಂಧಿ ಕುಟುಂಬದವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂಬುದಾಗಿ ಕೆಲ ಕಾಂಗ್ರೆಸ್ ನಾಯಕರ ಒಂದು ಬಣ ಬೆಂಬಲಿಸಿದ್ರೇ.. ಮತ್ತೆ ಗಾಂಧಿ ಕುಟುಂಬದವರೇತರರು ಎಐಸಿಸಿ ಅಧ್ಯಕ್ಷರಾಗಿ ನೇಮಕಕ್ಕೆ ಬೆಂಬಲ ಸೂಚಿಸಿದ್ದರು. ಕೊನೆಗೆ ಗಾಂಧಿ ಕುಟುಂಬದವರ ವಿರುದ್ಧವೇ ಟ್ವಿಟ್ ಮಾಡಿದವರು ಯೂ ಟರ್ನ್ ಹೊಡೆದಿದ್ದರು.

ಈ ಬಳಿಕ ಸೋನಿಯಾ ಗಾಂಧಿಯವರೇ ಎಐಸಿಸಿ ಹಂಗಾಮಿ ಅಧ್ಯಕ್ಷೆಯಾಗಿ ಮುಂದುವರೆಯುವಂತೆ ಮನವೊಲಿಸಿದ್ದರಿಂದಾಗಿ ಇದೀಗ ಅವರೇ ಮುಂದುವರೆದಿದ್ದಾರೆ.

- Advertisement -

Latest News

error: Content is protected !!