Friday, May 10, 2024
Homeತಾಜಾ ಸುದ್ದಿಯಶ್​-ರಾಧಿಕಾ ಮಗನಿಗೆ ನಾಮಕರಣ: ಹೆಸರೇನು ಗೊತ್ತಾ?

ಯಶ್​-ರಾಧಿಕಾ ಮಗನಿಗೆ ನಾಮಕರಣ: ಹೆಸರೇನು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು: ಯಶ್ ಮತ್ತು ರಾಧಿಕ ಪಂಡಿತ್ ಮಗನ ಹೆಸರು ಕೊನೆಗೂ ಬಹಿರಂಗಗೊಂಡಿದ್ದು ಯಥರ್ವ್ ಯಶ್ ಎಂದು ನಾಮಕರಣ ಮಾಡಲಾಗಿದೆ.

ಇತ್ತೀಚಿಗೆ ಯಶ್ ಅವರ ಫಾರ್ಮ್ ಹೌಸ್ ನಲ್ಲಿ ಸರಳವಾಗಿ ನಾಮಕರಣ ಸಮಾರಂಭ ಆಯೋಜಿಸಲಾಗಿತ್ತು. ಈ ಕುರಿತ ವಿಡಿಯೋವೊಂದು ಯಶ್ ಮತ್ತು ರಾಧಿಕ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಬಹುದಿನಗಳ ಕುತೂಹಲಕ್ಕೆ ತೆರೆಬಿದ್ದಿದೆ.

ಯಥರ್ವ ಎಂದರೆ ಸಂಪೂರ್ಣ ಎಂದು ಅರ್ಥ. ಮಗನ ನಾಮಕರಣ ವಿಡಿಯೋವನ್ನು ಶೇರ್ ಮಾಡಿ ಯಶ್ ದಂಪತಿ “ನಮ್ಮನ್ನು ಪೂರ್ಣಗೊಳಿಸಿದವನು” ಎಂದು ಬರೆದುಕೊಂಡಿದ್ದಾರೆ ಜೊತೆಗೆ “ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ” ಎಂದು ಹೇಳಿದ್ದಾರೆ.

ಮಗನ ನಾಮಕರಣದ ಸಂಭ್ರಮದಲ್ಲಿ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಹೂವಿನಿಂದ ಅಲಂಕರಿಸಿದ ಸುಂದರ ಮಂಟಪ ದಲ್ಲಿ ಯಶ್ ಇಬ್ಬರ ಮಕ್ಕಳು ರಾರಾಜಿಸುತ್ತಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ಯಶ್ ಮತ್ತು ರಾಧಿಕಾ ಕಂಗೊಳಿಸುತ್ತಿದ್ದಾರೆ. ರಾಧಿಕಾ ಪೋಷಕರು ಮತ್ತು ಯಶ್ ಪೋಷಕರು ಹಾಗೂ ತೀರಾ ಆಪ್ತರು ಮಾತ್ರ ನಾಮಕರಣ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

- Advertisement -
spot_img

Latest News

error: Content is protected !!