Saturday, June 6, 2026
Homeಕರಾವಳಿಬೆಳ್ತಂಗಡಿ: ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯ

ಬೆಳ್ತಂಗಡಿ: ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ವತಿಯಿಂದ ಸ್ವಚ್ಛತಾ ಕಾರ್ಯ

- Advertisement -
- Advertisement -

ಬೆಳ್ತಂಗಡಿ: ಮೂಲ್ಯರ ಯಾನೆ ಕುಲಾಲರ ಸೇವಾ ಸಂಘದ ಕಣಿಯೂರು ಘಟಕದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮವು ಉರುವಾಲು ಗ್ರಾಮದ ಹಲೇಜಿ ಬಸ್ ತಂಗುದಾಣದ ಪರಿಸರದಲ್ಲಿ ನಡೆಯಿತು.

ಕಳೆದ ಕೆಲವು ವರ್ಷಗಳಿಂದ ಊರವರ ಹಾಗೂ ಪಂಚಾಯತಿನ ನಿರ್ಲಕ್ಷಕ್ಕೆ ಒಳಪಟ್ಟು ಬೀದಿನಾಯಿಗಳ ಗೂಡಾಗಿತ್ತು ಹಾಗೆ ಬಸ್ ಸ್ಟಾಂಡ್ ಸುತ್ತಮುತ್ತಲಿನ ಪರಿಸರ ಕಸ ಮತ್ತು ಪ್ಲಾಸ್ಟಿಕ್ ಗಳಿಂದ ತುಂಬಿಹೋಗಿತ್ತು ಇದನ್ನರಿತ ಮೂಲ್ಯರ ಯಾನೆ ಕುಲಾಲರ ಸಂಘ ಕಣಿಯೂರು ಇದರ ಸದಸ್ಯರು ಸೇರಿ ಸ್ವಚ್ಛಮಾಡಿ ಪ್ರಯಾಣಿಕರಿಗೆ ತಂಗಲು ಯೋಗ್ಯವಾಗುವಂತೆ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಉಮೇಶ್ ಪಿಲಿಗೂಡು ಸಂಘಟನಾ ಕಾರ್ಯದರ್ಶಿಯಾದ ಸುಧೀರ್. ಕೆ ಯನ್ ಹಲೇಜಿ, ಉಪಾಧ್ಯಕ್ಷರಾದ ಯಶೋಧರ ಅಂತರ,
ಕಾರ್ಯಕಾರಿಣಿ ಸದಸ್ಯರಾದ ಸೇಸಪ್ಪ ಮೂಲ್ಯ ಪಿಲಿಗೂಡು, ಉದಯ ಕಲ್ಲೇರಿ, ರಾಜೇಶ್ ಅಂತರ, ಸುರೇಶ್ ನಾಣಿಲು, ದಿನೇಶ್ ಅಂತರ, ಸಂಜೀವ್ ಮೂಲ್ಯ ಹಲೇಜಿ, ಅಶೋಕ್ ಬರಂಬು, ಅಶೋಕ್ ಹಲೇಜಿ, ಜ್ಯೋತಿ ಹಲೇಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!