Saturday, June 6, 2026
Homeಕರಾವಳಿಉಡುಪಿಗಂಗೊಳ್ಳಿ: ಜಗಳ ಆರಂಭವಾಗಿ ಪರಸ್ಪರ ಹೊಡೆದಾಟ, ನಾಲ್ವರ ಬಂಧನ !

ಗಂಗೊಳ್ಳಿ: ಜಗಳ ಆರಂಭವಾಗಿ ಪರಸ್ಪರ ಹೊಡೆದಾಟ, ನಾಲ್ವರ ಬಂಧನ !

- Advertisement -
- Advertisement -

ಗಂಗೊಳ್ಳಿ: ಜಗಳ ಆರಂಭವಾಗಿ ನಾಲ್ಕು ಜನ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹಾಲು ಡೈರಿಯ ಬಳಿ ನಡೆದಿದೆ.

ಅಮೀತ್ , ಅಜೀತ್ , ಪ್ರದೀಪ್ , ನಿಶಾನ್ ಎಂಬ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ನಂಜಾ ನಾಯ್ಕ ರವರು ಇತರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಹಾಲು ಡೈರಿಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಅಮೀತ್ , ಅಜೀತ್ , ಪ್ರದೀಪ್ , ನಿಶಾನ್ ಎಂಬವರುಗಳು ಪರಸ್ಪರ ದೂಡಾಡಿಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವನ್ನುಂಟು ಮಾಡುತ್ತಿದ್ದರು.

ಈ ವೇಳೆ ನಾಲ್ವರನ್ನೂ ವಶಕ್ಕೆ ಪಡೆದು ಪೊಲೀಸರು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!