Friday, June 27, 2025
Homeತಾಜಾ ಸುದ್ದಿ"ಲೂಡೋ ಆಡುವಾಗ ತಂದೆಯಿಂದ ಮೋಸ" ನ್ಯಾಯಾಲಯದ ಮೊರೆ ಹೋಗಿರುವ ಖತರ್ನಾಕ್ ಮಗಳು!…

“ಲೂಡೋ ಆಡುವಾಗ ತಂದೆಯಿಂದ ಮೋಸ” ನ್ಯಾಯಾಲಯದ ಮೊರೆ ಹೋಗಿರುವ ಖತರ್ನಾಕ್ ಮಗಳು!…

spot_img
- Advertisement -
- Advertisement -

ಮಧ್ಯ ಪ್ರದೇಶ: ಇಲ್ಲಿನ ಯುವತಿಯೋರ್ವಳು ತನ್ನ ತಂದೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ. ಕಾರಣ ಕೇಳಿದರೆ ನೀವು ಆಶ್ಚರ್ಯ ಪಡಬಹುದು. ಈಕೆ ಲೂಡೋ ಆಡುವಾಗ ತಂದೆಯಿಂದ ಮೋಸ ಆಯಿತೆಂದು ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಹೀಗೊಂದು ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಈ ವಿಚಾರ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೊರೋನಾ ವೈರಸ್​ ಬಂದ ನಂತರದ ಅವಧಿಯಲ್ಲಿ ಭಾರತದಲ್ಲಿ ಲೂಡೋ ಆಟ ತುಂಬಾನೇ ಖ್ಯಾತಿ ಪಡೆದುಕೊಂಡಿದೆ. ಮಧ್ಯ ಪ್ರದೇಶದ ಕುಟುಂಬವೊಂದು ಇತ್ತೀಚೇಗೆ ಲೂಡೋ ಆಟದಲ್ಲಿ ತೊಡಗಿತ್ತು. ಈ ವೇಳೆ ಅಪ್ಪ, ಮಗಳನ್ನು ಸೋಲಿಸಿದ್ದ. ಇದಕ್ಕೆ ಸಿಟ್ಟಾದ ಮಗಳು ಕೋರ್ಟ್​ ಮೆಟ್ಟಿಲೇರಿದ್ದಾಳೆ. ‘ನನ್ನ ತಂದೆ ನನಗೆ ಮೋಸ ಮಾಡುತ್ತಾನೆ ಎಂದು ನಾನು ಭಾವಿಸಿರಲಿಲ್ಲ. ಈ ಘಟನೆ ನಂತರದಲ್ಲಿ ನನಗೆ ತಂದೆ ಮೇಲಿದ್ದ ಗೌರವ ಸಂಪೂರ್ಣ ನಾಶವಾಗಿದೆ. ಈ ಮೋಸದ ವಿಚಾರವಾಗಿ ನಾನು ಭೋಪಾಲ್​ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇನೆ ಎಂದಿದ್ದಾಳೆ,” ಮಗಳು.

- Advertisement -
spot_img

Latest News

error: Content is protected !!