Wednesday, July 15, 2026
Homeಕರಾವಳಿಮಂಗಳೂರುಪುತ್ತೂರು: ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣ: ನಾಪತ್ತೆಯಾದ ಮಹಿಳೆಯ ಬಾವ ಪ್ರತ್ಯಕ್ಷ

ಪುತ್ತೂರು: ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣ: ನಾಪತ್ತೆಯಾದ ಮಹಿಳೆಯ ಬಾವ ಪ್ರತ್ಯಕ್ಷ

- Advertisement -
- Advertisement -

ಪುತ್ತೂರು: ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಮಹಿಳೆ ಮಮತಾರ ಪತಿ ಕೆದಿಲ ವಳಂಕುಮೇರಿ ನಿವಾಸಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಮಮತಾ ಸಾವಿನ ಮೇಲೆ ಶಂಕೆ ವ್ಯಕ್ತಪಡಿಸಿ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು.

ಮಮತಾ ಅವರ ಮೃತದೇಹ ಆ.6 ರಂದು ಕೆದಿಲ ಗ್ರಾಮದ ಕಾಂತುಕೋಡಿ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿತ್ತು.  ಅದೇ ದಿನ ರಾಮಣ್ಣ ಗೌಡ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ಅವರು ನಾಪತ್ತೆಯಾಗಿದ್ದರು.ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆ ಆರಂಭಿಸಿದ್ದರು. ಆದರೆ ಲೋಕಯ್ಯ ಗೌಡ ಅವರು ಪತ್ತೆಯಾಗಿರಲಿಲ್ಲ.

ಇದೀಗ ಧಿಡೀರ್ ಎಂದು ಆ.10 ರಂದು ಬೆಳಗ್ಗೆ ಲೋಕಯ್ಯ ಗೌಡ ಅವರು ತನ್ನ ಮನೆಯ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಅವರನ್ನು ನೋಡಿ ಮನೆ ಮಂದಿ ಮಮತಾ ಅವರ ಕೊಲೆ ನಡೆದಿರುವ ಕುರಿತು ವಿಚಾರಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!