Tuesday, September 10, 2024
Homeಕರಾವಳಿಪುಂಜಾಲಕಟ್ಟೆ: ಅಕ್ರಮ ಕಸಾಯಿಖಾನೆಗೆ ದಾಳಿ, ಇಬ್ಬರ ಬಂಧನ

ಪುಂಜಾಲಕಟ್ಟೆ: ಅಕ್ರಮ ಕಸಾಯಿಖಾನೆಗೆ ದಾಳಿ, ಇಬ್ಬರ ಬಂಧನ

spot_img
- Advertisement -
- Advertisement -

ಪುಂಜಾಲಕಟ್ಟೆ: ಅಕ್ರಮವಾಗಿ ದನವನ್ನು ವಧೆ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಸಿದ್ದಾರೆ.
ಮಚ್ಚಿನ ನಿವಾಸಿಗಳಾದ ಮಹಮ್ಮದ್ ಹನೀಫ್ ಮತ್ತು ಮಹಮ್ಮದ್ ಸಾಧಿಕ್ ಬಂಧಿತ ಆರೋಪಿಗಳು. ದಾಳಿಯ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು ಹಂಝ ಪರಾರಿಯಾದ ಆರೋಪಿ. ಆತನ ಪತ್ತೆಗೆ ಬಲೆ ಬೀಸಿದ್ದಾರೆ.

ಬಂಧಿತರಿಂದ ಸುಮಾರು 3000 ಮೌಲ್ಯದ 15 ಕೆ.ಜಿ.ದನದ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ವದೆ ಮಾಡಲು ಬಳಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಬೆರ್ಬಲಾಜೆ ಮಹಮ್ಮದ್ ಹನೀಪ್ ಅವರ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಅಕ್ರಮವಾಗಿ ದನಗಳ ವಧೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಪುಂಜಾಲಕಟ್ಟೆ ಎಸ್.ಐ.ಸೌಮ್ಯ ನೇತೃತ್ವದ ತಂಡ ದಾಳಿ ನಡೆಸಿತ್ತು.

- Advertisement -
spot_img

Latest News

error: Content is protected !!