Thursday, April 25, 2024
Homeಉದ್ಯಮಮೇ 4 ರಿಂದ ಮದ್ಯದ ಜೊತೆ ಪಾನ್-ಗುಟ್ಕಾ, ತಂಬಾಕು ಮಾರಾಟಕ್ಕೂ ಅವಕಾಶ

ಮೇ 4 ರಿಂದ ಮದ್ಯದ ಜೊತೆ ಪಾನ್-ಗುಟ್ಕಾ, ತಂಬಾಕು ಮಾರಾಟಕ್ಕೂ ಅವಕಾಶ

spot_img
- Advertisement -
- Advertisement -

ಬೆಂಗಳೂರು : ದೇಶದಲ್ಲಿ ಮಾರಕ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮೇ 17 ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಆದರೆ ಎಲ್ಲಾ ವಲಯಗಳಲ್ಲಿ ಕೂಡ ಮೇ 4 ರಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.

ಇದರೊಂದಿಗೆ ಇನ್ನೆರಡು ದಿನದಲ್ಲಿ ಪಾನ್-ಗುಟ್ಕಾ ತಂಬಾಕು ಮಾರಾಟಕ್ಕೂ ಕೇಂದ್ರದಿಂದ ಅವಕಾಶ ಸಿಗಲಿದೆ. ಹೌದು, ಮದ್ಯದೊಟ್ಟಿಗೆ ಪಾನ್ ಮಸಾಲ, ಗುಟ್ಕಾ, ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶ ನೀಡಲಾಗಿದೆ.ಆದರೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಪಾರ್ಸೆಲ್ ತೆಗೆದುಕೊಂಡು ಹೋಗುವುದು ಸೇರಿದಂತೆ ಹಲವು ನಿರ್ಬಂಧಗಳೊಂದಿಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಮಾಡುವುದನ್ನು, ಉಗುಳುವುದನ್ನು ನಿಷೇಧಿಸಲಾಗಿದೆ.

ದೇಶದಲ್ಲಿ ಮತ್ತೆ ಎರಡು ವಾರ ಲಾಕ್ಡೌನ್ ಮುಂದುವರಿಸಲಾಗಿದ್ದು, ಕೆಲವೊಂದು ವಾಣಿಜ್ಯ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆರ್ಥಿಕತೆ ಉದ್ದೇಶದಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ

- Advertisement -
spot_img

Latest News

error: Content is protected !!