- Advertisement -
- Advertisement -
ಭೋಪಾಲ್: 57 ವರ್ಷದ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ತನಗಿಂತ ಕಿರಿಯ ಸಹೋದ್ಯೋಗಿ ಮೇಲೆ ಪ್ರೀತಿ ಚಿಗುರಿದೆ. 45 ವರ್ಷದ ಸಹೋದ್ಯೋಗಿ ಮನೆಗೆ ಬಂದ ಮಹಿಳಾ ಅಧಿಕಾರಿ ತನ್ನೆಲ್ಲ ಆಸ್ತಿ ನೀನು ತೆಗೆದುಕೊಂಡು ನಿನ್ನ ಗಂಡನನ್ನು ನನಗೆ ಕೊಡು ಎಂದಿದ್ದಾಳೆ. ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.
ಏಪ್ರಿಲ್ 17ರ ನಂತ್ರ ಕೌಟುಂಬಿಕ ಕೋರ್ಟ್ ನಲ್ಲಿ ಈ ವಿಷ್ಯ ಬಹಿರಂಗವಾಗಿದೆ. ಮಹಿಳಾ ಅಧಿಕಾರಿ ಪತಿ 10 ವರ್ಷಗಳ ಹಿಂದೆ ಸಾವನ್ನಪ್ಪಿದ್ದರಂತೆ. ಮಗ-ಸೊಸೆ ದೂರ ಮಾಡಿದ ನಂತ್ರ ಅಧಿಕಾರಿ ಸಹೋದ್ಯೋಗಿಗೆ ಹತ್ತಿರವಾಗಿದ್ದರಂತೆ. ಲಾಕ್ ಡೌನ್ ಕಾರಣ ಪ್ರೇಮಿಯಿಂದ ದೂರವಿದ್ದ ಅಧಿಕಾರಿಗೆ ಪ್ರೇಮಿ ಭೇಟಿಯಾಗುವ ಆಸೆ ಮೂಡಿದೆ. ಏಪ್ರಿಲ್ 17ರಂದು ಪ್ರೇಮಿ ಮನೆಗೆ ಬಂದ ಅಧಿಕಾರಿ ಆತನ ಪತ್ನಿ ಮುಂದೆ ಆಸ್ತಿ ನೀಡುವ ಬೇಡಿಕೆಯಿಟ್ಟಿದ್ದಾರೆ. ಪತ್ನಿ ಬಿಡಲು ಸಾಧ್ಯವಿಲ್ಲವೆಂದು ಪ್ರೇಮಿ ಹೇಳಿದ್ದಾನೆ.
ಪ್ರೇಮಿ ಪತ್ನಿ ಗಂಡ ಮೋಸ ಮಾಡಿದ್ದಾನೆಂದು ಕೋರ್ಟ್ ಮೊರೆ ಹೋಗಿದ್ದಾಳೆ.
- Advertisement -