Wednesday, June 3, 2026
Homeತಾಜಾ ಸುದ್ದಿತೆಂಡೂಲ್ಕರ್ ಕಟೌಟ್‌ಗೆ ಕಪ್ಪು ಆಯಿಲ್ ಸುರಿದು ಪ್ರತಿಭಟನೆ- ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದದ್ದೇ...

ತೆಂಡೂಲ್ಕರ್ ಕಟೌಟ್‌ಗೆ ಕಪ್ಪು ಆಯಿಲ್ ಸುರಿದು ಪ್ರತಿಭಟನೆ- ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದದ್ದೇ ತಪ್ಪಾಯಿತೇ?

- Advertisement -
- Advertisement -

ಕೊಚ್ಚಿ: ಕೆಲವು ದಿನಗಳ ಹಿಂದೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೈಕ್ರೋ ಬ್ಲಾಗಿಂಗ್ ಟ್ವಿಟರ್‌ನಲ್ಲಿ ಭಾರತದಲ್ಲಿ ರೈತರ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ವ್ಯಕ್ತಿಗಳು ಬೆಂಬಲ ಸೂಚಿಸಿದ ವಿಷಯಕ್ಕೆ ಸಂಭಂದಿಸಿ ಟ್ವೀಟ್ ಮಾಡಿದ್ದರು.ಜಾಗತಿಕ ಸೆಲೆಬ್ರಿಟಿಗಳ ಅಭಿಪ್ರಾಯಗಳ ಬಗ್ಗೆ ಟ್ವೀಟ್ ಮಾಡಿದ್ದ ಸಚಿನ್, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ಬಾಹ್ಯ ಶಕ್ತಿಗಳು ದೇಶದ ಆಂತರಿಕ ವಿಷದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದ್ದರು.

ಈ ವಿಷಯಕ್ಕೆ ಸಂಭಂದಿಸಿ ಕೇರಳದ ಕೊಚ್ಚಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಕಟೌಟ್‌ಗೆ ಕಪ್ಪು ಆಯಿಲ್ ಸುರಿದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಚಿನ್ ಟ್ವೀಟ್ ಸಮಂಜಸವಲ್ಲ ಎಂದು ಕೊಚ್ಚಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಸಚಿನ್ ಕಟೌಟ್‌ಗೆ ಕಪ್ಪು ಆಯಿಲ್ ಸುರಿದು ಆಕ್ರೋಶ ಹೊರಹಾಕಿದ್ದಾರೆ.

- Advertisement -

Latest News

error: Content is protected !!