ಪುತ್ತೂರು: ಮಹಿಳಾ ವೈದ್ಯಾಧಿಕಾರಿಗೆ ನಿಂದಿಸಿ ಹಲ್ಲೆಗೆ ಯತ್ನ ಆರೋಪದಡಿ
ಪ್ರಕರಣ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಎದುರು ನಿನ್ನೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ಮೇಲೆ
ಝೋಹರಾ ಎಂಬ ಮಹಿಳೆ ಮತ್ತು ಆಕೆಯ ಪುತ್ರನಿಂದ ಹಲ್ಲೆ ಯತ್ನದ ಬಗ್ಗೆ ವೈದ್ಯೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು.
ವೈದ್ಯೆಯ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದ ಪೊಲೀಸರು, ಆರೋಪಿಗಳನ್ನು ಠಾಣೆಗೆ ಕರೆಸಿ ವಾಪಸ್ ಬಿಟ್ಟು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ವೈದ್ಯಾಧಿಕಾರಿ ಡಾ. ಆಶಾಜ್ಯೋತಿ ನಿನ್ನೆ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ರೌಂಡ್ಸ್ ನಲ್ಲಿದ್ದ ವೇಳೆ ಆರೋಪಿಗಳಾದ ಝೋಹರಾ ಮತ್ತು ಪುತ್ರ ರೋಗಿ ಮಲಗುವ ಬೆಡ್ ನಲ್ಲಿ ಕುಳಿತುಕೊಂಡಿದ್ದನ್ನು ಗಮನಿಸಿ ವಾರ್ಡ್ ನಿಂದ ಹೊರಗೆ ಹೋಗುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಈ ವೇಳೆ ಝೋಹರಾ ಏರು ಧ್ವನಿಯಲ್ಲಿ ಎದುರುತ್ತರ ನೀಡಿದ್ದು, ಪುತ್ರ ವೈದ್ಯೆ ಮೇಲೆ ಹಲ್ಲೆ ಯತ್ನ ನಡೆಸಿ ತಳ್ಳಿರುವುದಾಗಿ ಡಾ. ಆಶಾಜ್ಯೋತಿ ದೂರು ದಾಖಲಿಸಿದ್ದರು.


