Sunday, June 7, 2026
Homeಅಪರಾಧಉಡುಪಿ: ಮೊಬೈಲ್ ಗೆ ಬಂದಿರುವ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪ್ರೊಫೆಸರ್!

ಉಡುಪಿ: ಮೊಬೈಲ್ ಗೆ ಬಂದಿರುವ ಲಿಂಕ್ ಕ್ಲಿಕ್ ಮಾಡಿ ಹಣ ಕಳೆದುಕೊಂಡ ಪ್ರೊಫೆಸರ್!

- Advertisement -
- Advertisement -

ಉಡುಪಿ: ಮೊಬೈಲ್‌ಗೆ ಬಂದಿರುವ ಲಿಂಕ್‌ ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು 33,500 ರೂ ಕಳೆದುಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಅಂಬೆರ್‌ಕರ್ ಮೋಹನ್ ಬಾಬು ವಿ.(43) ಎಂಬವರು ಎಸ್‌ಬಿಐ ಮಣಿಪಾಲ ಶಾಖೆಯಲ್ಲಿ ಖಾತೆ ಹೊಂದಿದ್ದು, ಆ.3ರಂದು ಇವರಿಗೆ ಅಪರಿಚಿತರು ಮೊಬೈಲ್ ಸಂದೇಶದಲ್ಲಿ ಬ್ಯಾಂಕ್ ಖಾತೆಯ ಕೆವೈಸಿ ಅಪ್‌ಡೇಟ್ ಮಾಡುವಂತೆ ಲಿಂಕ್ ಕಳುಹಿಸಿದ್ದರು.

ಇದನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ ₹ 20,000 ಹಾಗೂ ₹ 13,500 ನಗದು ಕಡಿತವಾಗಿದೆ. ವಂಚನೆ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -

Latest News

error: Content is protected !!