Wednesday, June 26, 2024
Homeಮನರಂಜನೆ2ನೇ ವಿವಾಹವಾದ ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಪಕ ದಿಲ್ ರಾಜು

2ನೇ ವಿವಾಹವಾದ ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಪಕ ದಿಲ್ ರಾಜು

spot_img
- Advertisement -
- Advertisement -

ದಕ್ಷಿಣ ಭಾರತದ ಯಶಸ್ವಿ ನಿರ್ಮಾಪಕ ಮತ್ತು ವಿತರಕ ದಿಲ್​ ರಾಜು​​ 2ನೇ ಮದುವೆಯಾಗಿದ್ದಾರೆ. ಬಹುಕಾಲದ ಗೆಳತಿ ತೇಜಸ್ವಿಯವರನ್ನು 49 ವರ್ಷದ ದಿಲ್​​ ರಾಜು​ ನಿಜಾಮಾಬಾದ್​​ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ದಿಲ್​ ರಾಜು ಅವರ ಪತ್ನಿ ಅನಿತಾ 2017 ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು. ಆ ಬಳಿಕ ಒಬ್ಬಳೇ ಮಗಳಿಗೆ ವಿವಾಹ ಮಾಡಿಕೊಟ್ಟರು. ಮಗಳನ್ನು ಗಂಡನ ಮನೆಗೆ ಕಳುಹಿಸಿಕೊಟ್ಟ ನಂತರ ದಿಲ್​ ರಾಜು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇದೀಗ ತೇಜಸ್ವಿ ಎಂಬವರ ಜೊತೆಗೆ ದಿಲ್​ ರಾಜು ಎರಡನೇ ವಿವಾಹವಾಗಿದ್ದಾರೆ.

ಟಾಲಿವುಡ್​ನಲ್ಲಿ ಸಕ್ಸಸ್​ಫುಲ್​​​ ನಿರ್ಮಾಪಕ ಎಂದು ಹೆಸರು ಮಾಡಿದ್ದ ದಿಲ್​ ರಾಜು ತಮ್ಮ ಶ್ರೀ ವೆಂಕಟೇಶ್ವರ ಕ್ರಿಯೇಷನ್​​ ಮೂಲಕ ಅನೇಕ ಯಶಸ್ವಿ ಸಿನಿಮಾಗಳನ್ನು ತೆರೆಗೆ ತಂದಿದ್ದಾರೆ. ಮಾತ್ರವಲ್ಲದೆ ಸಿನಿಮಾವೊಂದಕ್ಕೆ‘ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

2003ರಲ್ಲಿ ದಿಲ್​​ ಸಿನಿಮಾದ ಮೂಲಕ ನಿರ್ಮಾಪಕರಾಗಿ ಪ್ರಯಾಣ ಆರಂಭಿಸಿದರು. ಆನಂತರ ಆರ್ಯ, ಬೊಮ್ಮರಿಲ್ಲು, ಮಿಸ್ಟರ್​ ಪರ್ಫೆಕ್ಟ್​​, ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಮುಂತಾದ ಹಿಟ್​ ಸಿನಿಮಾಗಳನ್ನು ದಿಲ್​ ರಾಜು ನಿರ್ಮಿಸಿದರು.

ಸದ್ಯ ದಿಲ್​ರಾಜು ನಿರ್ಮಿಸಿದ ಜಾನು ಸಿನಿಮಾ ಬಿಡುಗಡೆಯಾಗಿದೆ. ಇದರ ಜೊತೆಗೆ ನಾನಿ ಅಭಿನಯದ ವಿ, ಅಲ್ಲು ಅರ್ಜುನ್​​​ ನಟನೆಯ ಐಕಾನ್​ ಸಿನಿಮಾವನ್ನು ದಿಲ್​ ರಾಜ್​ ನಿರ್ಮಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!