Thursday, June 4, 2026
Homeಮನರಂಜನೆಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ವಿಧಿವಶ

ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ವಿಧಿವಶ

- Advertisement -
- Advertisement -

ಬೆಂಗಳೂರು; ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ (47) ವಿಧಿವಶರಾಗಿದ್ದಾರೆ.

ದೇಹದಲ್ಲಿ ಇನ್ಫೆಷನ್ ಉಂಟಾಗಿ ಕಳೆದ ಎರಡು ತಿಂಗಳಿಂದ ಶ್ರೀಧರ್ ನಾಯಕ್ ಅವರು ಬೆಂಗಳೂರಿನ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಅವರು ಗುರುತು ಹಿಡಿಯಲಾರದಷ್ಟು ಬದಲಾಗಿದ್ದರು.

ಇನ್ನು ಇತ್ತೀಚೆಗೆ ಸಾಕಷ್ಟು ಸೀರಿಯಲ್ ಕಲಾವಿದರು ಅವರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬಿದ್ದರು. ಆರ್ಥಿಕ ಸಹಾಯ ಕೂಡ ಮಾಡಿದ್ದರು. ಎಲ್ಲರೂ ಅವರು ಮತ್ತೆ ಚೇತರಿಸಿಕೊಳ್ಳುತ್ತಾರೆ ಎಂದುಕೊಂಡಿದ್ದರು.ಆದರೆ ಶ್ರೀಧರ್ ನಾಯಕ್ ನಿನ್ನೆ ತಡ ರಾತ್ರಿ ನಿಧನರಾಗಿದ್ದಾರೆ.

- Advertisement -

Latest News

error: Content is protected !!