Sunday, October 18, 2026
Homeಕರಾವಳಿಖಾಸಗಿ ಕಂಪೆನಿಯ ಉದ್ಯೋಗಿ ನಾಪತ್ತೆ: ನೇತ್ರಾವತಿ ದಡದಲ್ಲಿ ಸ್ಕೂಟರ್‌ ಪತ್ತೆ

ಖಾಸಗಿ ಕಂಪೆನಿಯ ಉದ್ಯೋಗಿ ನಾಪತ್ತೆ: ನೇತ್ರಾವತಿ ದಡದಲ್ಲಿ ಸ್ಕೂಟರ್‌ ಪತ್ತೆ

- Advertisement -
- Advertisement -

ಮಂಗಳೂರು: ಇಲ್ಲಿನ ಖಾಸಗಿ ಕಂಪೆನಿಯ ಉದ್ಯೋಗಿಯೋರ್ವ ನಾಪತ್ತೆಯಾಗಿದ್ದು, ಈತ ಜ. 22ರಂದು ಸಂಜೆ 4.30ಕ್ಕೆ ಮನೆಯಿಂದ ಸೆಲೂನ್‌ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ರಾತ್ರಿಯಾದರೂ ವಾಪಸಾಗಿರಲಿಲ್ಲ. ಹುಡುಕಾಟ ನಡೆಸಿದಾಗ ಜಪ್ಪು ಫೆರಿ ರಸ್ತೆಯ ನೇತ್ರಾವತಿ ನದಿ ದಡದಲ್ಲಿ ಅವರ ಸ್ಕೂಟರ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ನಗರದ ಜಪ್ಪು ಬಪ್ಪಾಲ್‌ ನಿವಾಸಿ, ಖಾಸಗಿ ಕಂಪೆನಿಯ ಉದ್ಯೋಗಿ ನವೀನ್‌ (58) ನಾಪತ್ತೆಯಾಗಿದ್ದಾರೆ.

ನವೀನನ್ನು ಸ್ಥಳದಲ್ಲಿ ಹುಡುಕಾಟ ನಡೆಸಿದ್ದರೂ ಆತ ಪತ್ತೆಯಾಗಿಲ್ಲ ಎನ್ನಲಾಗಿದೆ. ನಾಪತ್ತೆಯ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವೀನ್‌ 5 ಅಡಿ ಎತ್ತರ, ಗೋಧಿ ಮೈಬಣ್ಣ, ಕಪ್ಪು ಕೂದಲು, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಮನೆಯಿಂದ ಹೊರ ಹೋಗುವ ವೇಳೆ ಕಂದು ಬಣ್ಣದ ಚೆಕ್ಸ್‌ ಹೊಂದಿರುವ ತುಂಬು ತೋಳಿನ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿದ್ದರು. ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ. ಈ ಚಹರೆಯ ವ್ಯಕ್ತಿಯ ಮಾಹಿತಿ ಇದ್ದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!