Wednesday, April 16, 2025
Homeಅಪರಾಧಮುಟ್ಟಾಗಿದ್ದಾಳೆ ಎಂದು ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ

ಮುಟ್ಟಾಗಿದ್ದಾಳೆ ಎಂದು ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಪ್ರಾಂಶುಪಾಲ

spot_img
- Advertisement -
- Advertisement -

ಕೊಯಮತ್ತೂರು: ದಲಿತ ವಿದ್ಯಾರ್ಥಿನಿಯೋರ್ವಳು ಪರೀಕ್ಷೆ ಬರೆಯಲು ಬಂದ ಸಂದರ್ಭದಲ್ಲಿ ಮುಟ್ಟಾಗಿದ್ದು, ಈ ಕಾರಣಕ್ಕೆ ವಿದ್ಯಾರ್ಥಿಯನ್ನು ಪರೀಕ್ಷಾ ಕೊಠಡಿಯ ಹೊರಭಾಗದಲ್ಲಿ ಕೂರಿಸಿ ಪರೀಕ್ಷೆ ಬರೆಸಿರುವ ಅಮಾನವೀಯ ಘಟನೆ ತಮಿಳುನಾಡಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಈ ಘಟನೆಯು ತಡವಾಗಿ ಬೆಳಕಿಗೆ ಬಂದಿದ್ದು, ಹುಡುಗಿಯ ತಂದೆ ಪ್ರಾಶುಂಪಾಲರ ವಿರುದ್ಧ ದೂರನ್ನು ನೀಡಿದ್ದಾರೆ.

ಘಟನೆಯ ವಿವರ: ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕಿನಾತುಕಡವು ತಾಲೂಕಿನಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಪ್ರಿಲ್ 7 ರಂದು ವಿಜ್ಞಾನ ಪರೀಕ್ಷೆ ಬರೆಯಲು 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಬಂದಿದ್ದು, ಈ ಸಂದರ್ಭದಲ್ಲಿ ಆಕೆ ಮುಟ್ಟಾಗಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಶಾಲೆಯ ಪ್ರಾಂಶುಪಾಲರ ಬಳಿ ಸ್ಯಾನಿಟರಿ ಪ್ಯಾಡ್ ಕೇಳಿದ್ದಾಳೆ, ಸ್ಯಾನಿಟರಿ ಪ್ಯಾಡ್ ನೀಡಿದ ಪ್ರಾಂಶುಪಾಲರು ಬಳಿಕ ವಿದ್ಯಾರ್ಥಿನಿಗೆ ತರಗತಿಯ ಹೊರಗಡೆ ಕುಳಿತು ಪರೀಕ್ಷೆ ಬರೆಯುವಂತೆ ಹೇಳಿದ್ದಾರೆ, ಈ ವಿಚಾರವನ್ನು ವಿದ್ಯಾರ್ಥಿನಿ ಸಂಜೆ ಮನೆಗೆ ಹೋದ ಬಳಿಕ ತಾಯಿ ಬಳಿ ಹೇಳಿದ್ದಾಳೆ. ಹಾಗೆಯೇ ಏಪ್ರಿಲ್ 9ರಂದು ಕೂಡ ವಿದ್ಯಾರ್ಥಿನಿಯು ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಹೋಗಿದ್ದು, ಈ ಸಂದರ್ಭದಲ್ಲಿಯೂ ಪ್ರಾಶುಂಪಾಲರು ಆಕೆಯನ್ನು ಮತ್ತೆ ತರಗತಿಯ ಹೊರಗೆ ಕುಳಿತು ಪರೀಕ್ಷೆ ಬರೆಯಲು ಹೇಳಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯ ತಾಯಿ ಕೂಡಾ ಶಾಲೆಗೆ ಭೇಟಿ ನೀಡಿದ್ದು, ಆಗ ವಿದ್ಯಾರ್ಥಿನಿ ತರಗತಿ ಹೊರ ಭಾಗದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವುದನ್ನು ನೋಡಿದ್ದಾರೆ. ಈ ಘಟನೆಯಿಂದ ಸಿಟ್ಟಿಗೆದ್ದ ತಾಯಿ ತಮ್ಮ ಮೊಬೈಲ್ ನಲ್ಲಿ ತರಗತಿಯ ಹೊರ ಭಾಗದಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿರುವ ಮಗಳ ವಿಡಿಯೋ ಮಾಡಿದ್ದು, ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕಲಿಸುವ ಶಾಲೆಯಲ್ಲಿ ಇಂಥಹ ಅನಾಚಾರ ನಡೆಯುವುದು ಎಷ್ಟು ಸರಿ ಎಂದು ಶಿಕ್ಷಣ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಘಟನೆಯ ವಿರುದ್ಧ ಮಹಿಳಾ ಕಲ್ಯಾಣ ಇಲಾಖೆ, ರಾಜ್ಯ ಮಹಿಳಾ ಆಯೋಗ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಶಿಕ್ಷಣ ಇಲಾಖೆಗೂ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!