Monday, April 29, 2024
Homeಕರಾವಳಿನವಮಂಗಳೂರು ಬಂದರು ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ

ನವಮಂಗಳೂರು ಬಂದರು ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ

spot_img
- Advertisement -
- Advertisement -

ಪಣಂಬೂರು: ಪ್ರಧಾನಿ ಮೋದಿ ಅವರು ದೇಶದ ಬಂದರುಗಳ ಸಮಗ್ರ ಅಭಿವೃದ್ಧಿ ಸಾರಿಗೆ ವ್ಯವಸ್ಥೆಯ ಉನ್ನತೀಕರಣಕ್ಕೆ ಸುಮಾರು 17 ಸಾವಿರ ಕೋಟಿ ರೂ.ಯೋಜನೆಗೆ ಚೆನ್ನೈಯ ಟೂಟಿಕೊರಿನ್‌ನ ಚಿದಂಬರನಾ‌ ಬಂದರಿನಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿಯೇ ನವಮಂಗಳೂರು ಬಂದರಿನ ರಸ್ತೆ ಅಭಿವೃದ್ಧಿಗೂ ಪ್ರಧಾನಿ ಚಾಲನೆ ನೀಡಿದರು.

ತೈಲ ಸಂಗ್ರಹ ಟ್ಯಾಂಕ್ ನಡುವೆ ಟ್ರಕ್ ಓಡಾಟಕ್ಕೆ ಸುರಕ್ಷಿತ ರಸ್ತೆಯ ನಿರ್ಮಾಣವಾಗಲಿದ್ದು, 5 .04 ಕೋಟಿ ರೂ. ವೆಚ್ಚದಲ್ಲಿ ತಣ್ಣೀರುಬಾವಿಯಿಂದ ಎಂ.ಕೆ. ಅಗೋ ಟೆಕ್‌ವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದೆ. ಈ ರಸ್ತೆ 14 ಮೀಟರ್ ಅಗಲ, 775 ಮೀಟರ್ ಉದ್ದವಿರಲಿದೆ.

ಬಂದರಿನಲ್ಲಿ ಎರಡು ಸಂಗ್ರಹ ಕೇಂದ್ರವನ್ನು 23.78 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸರಕಾರಿ, ಖಾಸಗೀ ಸಹಭಾಗಿತ್ವದಲ್ಲಿ 150 ಬೆಡ್ ಆಸ್ಪತ್ರೆಯನ್ನು 107 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆದ್ಯತೆ ನೀಡಲಾಗಿದೆ.

- Advertisement -
spot_img

Latest News

error: Content is protected !!