Sunday, May 12, 2024
Homeತಾಜಾ ಸುದ್ದಿತಮ್ಮ ಭಾಷಣದಲ್ಲಿ ಕುವೆಂಪು ಅವರ ಕವನದ ಸಾಲುಗಳನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ತಮ್ಮ ಭಾಷಣದಲ್ಲಿ ಕುವೆಂಪು ಅವರ ಕವನದ ಸಾಲುಗಳನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

spot_img
- Advertisement -
- Advertisement -

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ನಿನ್ನೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಚೊಚ್ಚಲ ಭಾಷಣದಲ್ಲಿ ನೂತನವಾಗಿ ಆಯ್ಕೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತ ಕವಿ ಕುವೆಂಪು ಅವರ ಕವನವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಕುವೆಂಪು ಅವರ ಕೃತಿಯ ಉಲ್ಲೇಖವನ್ನು ಓದಿದ ದ್ರೌಪದಿ ಕುವೆಂಪು ಅವರ ಆದರ್ಶಗಳನ್ನು ಅನುಸರಿಸಲು ಯುವಕರಿಗೆ ಕರೆ ನೀಡಿದರು.

ಕನ್ನಡ ಭಾಷೆಯ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನ್ ರಾಷ್ಟ್ರಕವಿ ಕುವೆಂಪು ಅವರು ಬರೆದಿರುವಂತೆ, ನಾನು ಅಳಿವೆ, ನೀನು ಅಳಿವೆ, ನಮ್ಮ ಎಲುಬುಗಳ ಮೇಲೆ, ಮೂಡುವುದು – ಮೂಡುವುದು ನವಭಾರತದ ಲೀಲೆ’ ಇದರರ್ಥ ತಾಯ್ನಾಡಿಗಾಗಿ ನಾಗರಿಕರ ಉನ್ನತಿಗಾಗಿ ಸಂಪೂರ್ಣ ತ್ಯಾಗ ಮಾಡುವ ಕವಿಯ ಸ್ಪಷ್ಟ ಕರೆ ಇದಾಗಿದೆ ಎಂದು ಹೇಳಿದ ರಾಷ್ಟ್ರಪತಿಗಳು ಭಾರತವನ್ನು ನಿರ್ಮಿಸಲು ಹೊರಟಿರುವ ದೇಶದ ಯುವಕರಿಗೆ ಈ ಆದರ್ಶಗಳನ್ನು ಅನುಸರಿಸಲು ನನ್ನ ವಿಶೇಷ ಮನವಿಯಾಗಿದೆ ಎಂದರು.

- Advertisement -
spot_img

Latest News

error: Content is protected !!