Saturday, June 13, 2026
Homeತಾಜಾ ಸುದ್ದಿ30 ವರ್ಷಗಳಿಂದ ಇಲ್ಲಿ ಶೌಚಾಲಯದಲ್ಲಿ ತಯಾರಾಗುತ್ತಿತ್ತು ಸಮೋಸ;ಕೊನೆಗೂ ರೆಸ್ಟೋರೆಂಟ್ ಮುಚ್ಚಿಸಿದ ಅಧಿಕಾರಿಗಳು

30 ವರ್ಷಗಳಿಂದ ಇಲ್ಲಿ ಶೌಚಾಲಯದಲ್ಲಿ ತಯಾರಾಗುತ್ತಿತ್ತು ಸಮೋಸ;ಕೊನೆಗೂ ರೆಸ್ಟೋರೆಂಟ್ ಮುಚ್ಚಿಸಿದ ಅಧಿಕಾರಿಗಳು

- Advertisement -
- Advertisement -

ಸೌದಿ ಅರೆಬಿಯಾ; ಮೂವತ್ತು ವರ್ಷಗಳಿಂದ ಶೌಚಾಲಯದಲ್ಲಿ ಸಮೋಸ ತಯಾರಿಸಿ ಗ್ರಾಹಕರಿಗೆ ಮಹಾ ಮೋಸ ಮಾಡುತ್ತಿದ್ದ ರೆಸ್ಟೋರೆಂಟ್ ಒಂದರ ನಿಜ ಬಣ್ಣವನ್ನು ಕೊನೆಗೂ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ.
ಸೌದಿ ಅರೆಬಿಯಾದ ಜಿದ್ದಾದಲ್ಲಿ 30 ವರ್ಷಗಳಿಂದ ಶೌಚಾಲಯದಲ್ಲಿ ರೆಸ್ಟೋರೆಂಟ್ ಒಂದರ ಶೌಚಾಲಯದಲ್ಲಿ ಸಮೋಸ ತಯಾರಿಸುತ್ತಿದ್ದರು. ಇದನ್ನು ಪತ್ತೆ ಹಚ್ಚಿದ ಜಿದ್ದಾ ಮುನ್ಸಿಪಾಲಿಟಿ ಅಧಿಕಾರಿಗಳು ಕೂಡಲೇ ರೆಸ್ಟೋರೆಂಟ್ ಮುಚ್ಚಿಸಿದ್ದಾರೆ.


ಹಲವಾರು ವರ್ಷಗಳಿಂದ ಶೌಚಾಲಯದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತಿದೆ ಎಂಬ ಸುಳಿವು ಪಡೆದ ಅಧಿಕಾರಿಗಳು ದಾಳಿ ನಡೆಸಿ ಪತ್ತೆಹಚ್ಚಿದ್ದಾರೆ. ದಾಳಿ ವೇಳೆ ಹೋಟೆಲ್ ಶುದ್ಧತೆ ಕುರಿತ ಪ್ರಮಾಣ ಪತ್ರ ಕೂಡ ಹೊಂದಿರಲಿಲ್ಲ ಎಂಬುವುದು ತಿಳಿದು ಬಂದಿದೆ. ದಾಳಿ ವೇಳೆ‌ ಮಾಂಸ, ಚೀಸ್‌ ಕೂಡ ಟಾಯ್ಲೆಟ್ ನಲ್ಲಿ ಪತ್ತೆಯಾಗಿದೆ.

- Advertisement -

Latest News

error: Content is protected !!