Saturday, May 18, 2024
Homeತಾಜಾ ಸುದ್ದಿಇಲ್ಲಿ ಶ್ವಾನಗಳಿಗೂ‌ ಬೇಕೆ ಬೇಕು ಕೂಲರ್ ವ್ಯವಸ್ಥೆ:  ನಿತ್ಯ ನಾಲ್ಕಾರು ಬಾರಿ ಕುಡಿಸಲೇಬೇಕು ಎಳನೀರು: ಬಿಸಿಲಿಗೆ...

ಇಲ್ಲಿ ಶ್ವಾನಗಳಿಗೂ‌ ಬೇಕೆ ಬೇಕು ಕೂಲರ್ ವ್ಯವಸ್ಥೆ:  ನಿತ್ಯ ನಾಲ್ಕಾರು ಬಾರಿ ಕುಡಿಸಲೇಬೇಕು ಎಳನೀರು: ಬಿಸಿಲಿಗೆ ತತ್ತರಿಸಿದ ಶ್ವಾನಗಳಿಗೆ ದಿನವೂ ರಾಜಾತಿಥ್ಯ

spot_img
- Advertisement -
- Advertisement -

ಬಳ್ಳಾರಿ: ಬಳ್ಳಾರಿಯಲ್ಲಿ ಇರೋದು ಎರಡೇ ಕಾಲ ಒಂದು ಬೇಸಿಗೆ ಕಾಲ ಇನ್ನೊಂದು ಬಿರು ಬೇಸಿಗೆ ಕಾಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಯಾಕಂದ್ರೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋ‌ ಬಿಸಿಲಿನ ತಾಪಕ್ಕೆ ಮನುಷ್ಯರಷ್ಟೇ ಅಲ್ಲ ಇಲ್ಲಿ ಶ್ವಾನಗಳು ತತ್ತರಿಸಿ ಹೋಗ್ತಿವೆ. ಹೀಗಾಗಿ ಪೊಲೀಸ್ ಶ್ವಾನಗಳಿಗೆ ಮನೆಗಳಲ್ಲಿ ಇಟ್ಟಂತೆ ಶ್ವಾನ ಕೊಠಡಿಯಲ್ಲಿ ಕೂಲರ್ ಇಡಲಾಗಿದೆ. ಅಚ್ಚರಿಯಾದರೂ ಇದು ಸತ್ಯ ಸಂಗತಿ. ಪೊಲೀಸ್ ಇಲಾಖೆಯಲ್ಲಿ ‌ಇರೋ ಆರಕ್ಕೂ ಹೆಚ್ಚು ಶ್ವಾನ ಕೊಠಡಿ ಯಲ್ಲಿ ಕೂಲರ್ ,ಫ್ಯಾನ್ , ಎಕ್ಸಿಟ್ ಫ್ಯಾನ್ ವ್ಯವಸ್ಥೆ ಮಾಡಲಾಗಿದೆ..

ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಯಲ್ಲಿ ಈ‌ ಬಾರಿಯ ಬಿಸಿಲು ಜನರ ತಲೆ ಸುಡುತ್ತಿದೆ.  ನಿತ್ಯ 40 ರಿಂದ 41,42 ಡಿಗ್ರಿ ವರೆಗೂ ಹೆಚ್ಚಾಗುತ್ತಿರುವ ಬಿಸಿಲಿನ ತಾಪಮಾನ ಇಲ್ಲಿನ ಜನಜೀವನ ಅಸ್ತವ್ಯಸ್ತ ಮಾಡಿದೆ. ಹೀಗಾಗಿ ದಿನಕ್ಕೆ ಶ್ವಾನಗಳನ್ನು ಕೂಲಿಂಗ್ ವ್ಯವಸ್ಥೆಯಲ್ಲಿ ಇಡೋದ್ರ ಜೊತೆಗೆ ನಿತ್ಯ ನಾಲ್ಕಾರು ಬಾರಿ ಎಳ ನೀರು ಕುಡಿಸಲಾಗುತ್ತದೆ. ಇದರ‌ ಜೊತೆಗೆ ಗಂಟೆಗೊಮ್ಮೆ ಸ್ಪಂಜ್ ನಿಂದ ಮೈ ಒರೆಸೋದ್ರ ಜೊತೆಗೆ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಾಡಿಸುತ್ತಾರೆ.. ಶ್ವಾನವಿರೋ  ಪ್ರತಿಯೊಂದು ಕೊಠಡಿಯಲ್ಲಿ ಒಂದು ಕೂಲರ್, ಫ್ಯಾನ್, ಎಕ್ಸಿಟ್ ಫ್ಯಾನ್ ಜೊತೆಗೆ ಸೊಳ್ಳೆ ಪರದೇ ವ್ಯವಸ್ಥೆ ಮಾಡಲಾಗಿದೆ.

ವಿವಿಐಪಿ ಭದ್ರತೆ ಸೇರಿದಂತೆ ಕೊಲೆ ದರೋಡೆ ಸೇರಿದಂತೆ ಸೂಕ್ಷ್ಮ ಪ್ರಕರಣಗಳನ್ನು ಭೇದಿಸಲು ಬಳ್ಳಾರಿಯ ಶ್ವಾನದಳದ ಶ್ವಾನಗಳೇ ನಂಬರ್ ಒನ್. ಕೇವಲ ಬಳ್ಳಾರಿ ವಿಜಯನಗರ ಜಿಲ್ಲೆಯಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಸೂಕ್ಷ್ಮ ಪ್ರಕರಣ ಭೇದಿಸಲು ಬಳ್ಳಾರಿಯ ಶ್ವಾನದಳದ ಶ್ವಾನಗಳನ್ನು ಕರೆದುಕೊಂಡು ಹೋಗ್ತಾರೆ.. ಹೀಗಾಗಿ ಇಲ್ಲಿರೋ ನಾಲ್ಕಾರು ಥಳಿಯ ಶ್ವಾನಗಳಿಗೆ ನಿತ್ಯ ರಾಜಾತಿಥ್ಯ ನೀಡಲಾಗ್ತದೆ. ಸದ್ಯ ಬಳ್ಳಾರಿಯಲ್ಲಿ ನಿತ್ಯ 40 ರಿಂದ 41,42 ಡಿಗ್ರಿವರೆಗೂ ಬಿಸಿಲಿನ ತಾಪಕ್ಕೆ ಈ ರೀತಿಯ ಆರೈಕೆ ಮಾಡದೇ ಇದ್ರೇ ಶ್ವಾನಗಳು ತತ್ತರಿಸಿ ಹೋಗ್ತವೆ..

- Advertisement -
spot_img

Latest News

error: Content is protected !!