- Advertisement -
![]()
- Advertisement -
ಬೆಂಗಳೂರು: ಕೆಲವು ತಿಂಗಳ ಹಿಂದೆ ಉಡುಪಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗುಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಪವಾಸ ಕುಳಿತಿದ್ದಾನೆ.
ಕೊಲೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಕೋರ್ಟ್ ಗೆ ವರ್ಗಾಯಿಸುವಂತೆ ಒತ್ತಾಯಿಸಿ ಆಹಾರ ಸ್ವೀಕರಿಸಲು ಕೊಲೆ ಆರೋಪಿ ಪ್ರವೀಣ್ ಚೌಗುಲೆ ನಿರಾಕರಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಚೌಗುಲೆಗೆ ಜೀವ ಬೆದೆರಿಕೆ ಇರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಸೆಲ್ ನಲ್ಲಿ ಇರಿಸಲಾಗಿದ್ದು, ಜೈಲಿನ ಪ್ರಧಾನ ಬ್ಲಾಕ್ ಗೆ ಶಿಫ್ಟ್ ಮಾಡುವಂತೆ ಕೂಡಾ ಆರೋಪಿ ಮನವಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
2022ರ ನವೆಂಬರ್ ನಲ್ಲಿ ಉಡುಪಿಯ ನೇಜಾರು ಎಂಬಲ್ಲಿ ಒಂದೇ ಕುಟುಂಬದ ಅಯ್ನಾಸ್, ಅಫ್ಬಾನ್, ಹಸೀನಾ, ಆಸಿಂ ಅವರನ್ನು ಹತ್ಯೆ ಮಾಡಿದ್ದ ಅರುಣ್ ಚೌಗುಲೆಯನ್ನು ಜೀವ ಬೆದರಿಕೆ ಹಿನ್ನೆಲೆಯಲ್ಲಿ 2023ರ ನವೆಂಬರ್ ನಲ್ಲಿ ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು.
- Advertisement -


