Wednesday, June 3, 2026
Homeತಾಜಾ ಸುದ್ದಿಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ: ಸ್ಥಳೀಯರಿಂದಲೇ ಕೃತ್ಯ ಅನ್ನೋ ಪೊಲೀಸರ ಊಹೆ...

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳ ಬಂಧನ: ಸ್ಥಳೀಯರಿಂದಲೇ ಕೃತ್ಯ ಅನ್ನೋ ಪೊಲೀಸರ ಊಹೆ ನಿಜವಾಯ್ತು: ಅರೆಸ್ಟ್ ಆದ ಆ ಮೂವರು ಕೊಲೆಘಾತುಕರು ಯಾರು?

- Advertisement -
- Advertisement -

ಪುತ್ತೂರು : ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಮುಖ ಮೂವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಕೇರಳದಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಶಿಯಾಬ್, ರಿಯಾಝ್, ಬಶೀರ್ ಬಂಧಿತ ಆರೋಪಿಗಳು. ಮೂವರು ಕೂಡ ಸ್ಥಳೀಯರಾಗಿದ್ದು, ಓರ್ವ ಆರೋಪಿ ಪುತ್ತೂರಿನ ತಾಲೂಕಿನ ಅಂಕತಡ್ಕ ನಿವಾಸಿಯಾಗಿದ್ದು, ಮತ್ತಿಬ್ಬರು ಸುಳ್ಯ ತಾಲೂಕಿನ ಎಲಿಮಲೆ, ಬೆಳ್ಳಾರೆಯವರು ಎನ್ನಲಾಗಿದೆ. ಇವರೇ ಪ್ರವೀಣ್ ಅಂಗಡಿ ಬಳಿ ಪ್ರವೀಣ್ ರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದ್ದರು. ಮಧ್ಯಾಹ್ನ 12-30ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನೆವಾಣೆ ಅವರು ಸುದ್ದಿಗೋಷ್ಟಿ ಕರೆದಿದ್ದು, ಸುದ್ದಿಗೋಷ್ಟಿಯಲ್ಲಿ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

- Advertisement -

Latest News

error: Content is protected !!