Wednesday, June 3, 2026
Homeಇತರನೇಪಾಳಿ ಉಡುಪನ್ನು ಧರಿಸಿ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ ನಟ ಪ್ರಕಾಶ್ ರಾಜ್

ನೇಪಾಳಿ ಉಡುಪನ್ನು ಧರಿಸಿ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ ನಟ ಪ್ರಕಾಶ್ ರಾಜ್

- Advertisement -
- Advertisement -

ಬಹುಭಾಷಾ ನಟ, ರಾಜಕಾರಣಿ, ನಿರ್ದೇಶಕ ಹಾಗೂ ನಿರ್ಮಾಪಕ, ನಿರೂಪಕ ಪ್ರಕಾಶ್ ರಾಜ್ ಅವರು ಹೊಸ ವೇಷ ಧರಿಸಿರುವ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.   

ತಮ್ಮ ಟ್ವೀಟರ್ ನಲ್ಲಿ ಸ್ಥಳೀಯ ಸಾಂಪ್ರದಾಯಿಕ ನೇಪಾಳಿ ಉಡುಪನ್ನು ಧರಿಸಿರುವ ಎರಡು ಫೋಟೋಗಳನ್ನು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್ ಅವರು, ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನು ಫೋಟೋ ಕುರಿತು ಟ್ವೀಟ್ ಮಾಡಿರುವ ಅವರು, ‘ನಮ್ಮ ಸುಪ್ರೀಂ ಲೀಡರ್ ನಿಂದ ಸ್ಪೂರ್ತಿಗೊಂಡು ಇದನ್ನು ಧರಿಸಿದ್ದೇನೆ ಹಾಯ್ ಗಾಯ್ಸ್ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ನೇಪಾಳಕ್ಕೆ ಭೇಟಿ ನೀಡಿದ್ದು, ಈ ವಿಚಾರವನ್ನು ಅಣಕಿಸುವ ಸಲುವಾಗಿ ಹೀಗೆ ಟ್ವೀಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. 

- Advertisement -

Latest News

error: Content is protected !!