Wednesday, June 3, 2026
Homeತಾಜಾ ಸುದ್ದಿಸಿ.ಎಂ ಪುತ್ರನ ವರದಿ ಹಿನ್ನೆಲೆ,ಪವರ್ ಟಿವಿ ಪ್ರಸರಣಕ್ಕೆ ತಡೆ- ರೆಹಮಾನ್ ಅತ್ತಿದ್ಯಾಕೆ?

ಸಿ.ಎಂ ಪುತ್ರನ ವರದಿ ಹಿನ್ನೆಲೆ,ಪವರ್ ಟಿವಿ ಪ್ರಸರಣಕ್ಕೆ ತಡೆ- ರೆಹಮಾನ್ ಅತ್ತಿದ್ಯಾಕೆ?

- Advertisement -
- Advertisement -

ಬೆಂಗಳೂರು: ಸಿಎಂ ಪುತ್ರ ವಿಜಯೇಂದ್ರ ಅವರ ಕುರಿತು ವರದಿ ಮಾಡಿದ ಹಿನ್ನೆಲೆ ಯಲ್ಲಿ ಪವರ್ ಟಿವಿ ಪ್ರಸರಣವನ್ನು ತಡೆಹಿಡಿಯಲಾಗಿದೆ ಚಾನೆಲ್ ವಾರ್ತಾವಾಚಕ ರೆಹಮಾನ್ ಹಾಸನ್ ಹೇಳಿದ್ದಾರೆ.

ಸಿ ಎಂ ಪುತ್ರ ವಿಜಯೇಂದ್ರ ಅವರು ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದಕ್ಕಾಗಿ ಪವರ್ ಟಿವಿ ಪ್ರಸರಣವನ್ನು ತಡೆಹಿಡಿಯಲಾಗಿದೆ ಎನ್ನಲಾಗುತ್ತಿದ್ದು, ೨೫೦ ಸಿಬ್ಬಂದಿಗಳು ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.

“ಸಿಸಿಬಿ ಪೊಲೀಸರು ದಾಳಿ ಮಾಡಿ ತಮ್ಮ ಕಚೇರಿಯ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದಾರೆ. ಸರ್ವರ್ ಸಿಸ್ಟಮ್ ಕೊಂಡೊಯ್ದಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳ ಹಲವು ಜನಪರ ಕಾರ್ಯಗಳ ಕುರಿತು ನಾವು ವರದಿ ಮಾಡಿದ್ದೇವೆ, ಭ್ರಷ್ಟಾಚಾರದ ಕುರಿತು ವರದಿ ಮಾಡಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ, ನಾವು ಕಾನೂನು ಸಮಾರಾ ಮಾಡುತ್ತೇವೆ. ಈಗಾಗಲೇ ಫೇಸ್ ಬುಕ್ ಲಯ್ವ್ ಹಾಗೂ ಚಾನೆಲ್ ಪ್ರಸಾರ ನಿಲ್ಲಿಸಿದ್ದಾರೆ. ನಾವೆಲ್ಲಾ ಬೀದಿಗೆ ಬಿದ್ದೆವು” ಎಂದು ತಮ್ಮ ಫೇಸ್ ಬುಕ್ ಲಯ್ವ್ ನಲ್ಲಿ ಕಣ್ಣೀರು ಹಾಕಿದ್ದಾರೆ.

Posted by Rahman Hassan on Monday, 28 September 2020

- Advertisement -

Latest News

error: Content is protected !!