Wednesday, June 3, 2026
Homeತಾಜಾ ಸುದ್ದಿಗಿಣಿಗಳಿಗೆ ಇನ್ನಿಲ್ಲ ಆತಿಥ್ಯ! ರಾಗಿಣಿ,ಸಂಜನಾ ಸಾಮಾನ್ಯ ಜೈಲಿಗೆ

ಗಿಣಿಗಳಿಗೆ ಇನ್ನಿಲ್ಲ ಆತಿಥ್ಯ! ರಾಗಿಣಿ,ಸಂಜನಾ ಸಾಮಾನ್ಯ ಜೈಲಿಗೆ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ನಂಟು ಆರೋಪದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿಯನ್ನು 14 ದಿನದ ಜೈಲಿನ ಕ್ವಾರಂಟೈನ್ ನಂತರ ಸಾಮಾನ್ಯ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇಬ್ಬರನ್ನೂ ಒಂದೇ ಸೆಲ್ ನಲ್ಲಿ ಹಾಕಲಾಗಿದ್ದು, ಸಾಮಾನ್ಯ ಖೈದಿಯಂತೆ ಇರಲಿದ್ದಾರೆ.

14 ದಿನ ಜೈಲಿನ ಕ್ವಾರಂಟೈನ್ ನಲ್ಲಿದ್ದ ವೇಳೆ ನಟಿಯರ ಕೊಠಡಿಗೆ ಉಪಹಾರ, ಊಟ ಸೇರಿದಂತೆ ಅಗತ್ಯ ವಸ್ತುಗಳು ಕೊಠಡಿಗೆ ಬರುತ್ತಿದ್ದವು. ಇಂದಿನಿಂದ ಈ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ನಟಿ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅವರು ಸಾಮಾನ್ಯ ಖೈದಿಯಂತೆ ಸರತಿ ಸಾಲಿನಲ್ಲಿ ಉಪಹಾರ, ಊಟ ಪಡೆಯಬೇಕು.

- Advertisement -

Latest News

error: Content is protected !!