Thursday, June 4, 2026
Homeಕರಾವಳಿಮಳೆಗಾಲದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಇರಲಿ ಎಚ್ಚರ :ಸುಳ್ಯದಲ್ಲಿ ಹುಲ್ಲು ಕತ್ತರಿಸುವ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ...

ಮಳೆಗಾಲದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸುವಾಗ ಇರಲಿ ಎಚ್ಚರ :ಸುಳ್ಯದಲ್ಲಿ ಹುಲ್ಲು ಕತ್ತರಿಸುವ ಯಂತ್ರದಲ್ಲಿ ವಿದ್ಯುತ್ ಪ್ರವಹಿಸಿ ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ: ಹುಲ್ಲು ಕತ್ತರಿಸುವ ಯಂತ್ರದಿಂದ ವಿದ್ಯುತ್ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪ್ರವಹಿಸಿ ಅಜ್ಜಾವರ ಗ್ರಾಮದ ನಾರಾಲು ಎಂಬಲ್ಲಿ ನಡೆದಿದೆ.

ಕೃಷಿಕ ಚಾಮಯ್ಯ ಗೌಡ (54)ವಿದ್ಯುತ್ ಶಾಕ್ ಗೆ ಬಲಿಯಾದವರು. ನಿನ್ನೆ ಬೆಳಗ್ಗೆ  ಚಾಮಯ್ಯ ಗೌಡರು ಮನೆಯ ಹಟ್ಟಿಯ ಬಳಿ ಹುಲ್ಲು ಕತ್ತರಿಸುವ ಯಂತ್ರದ ಪ್ಲೆಗ್ ಹಾಕುವಾಗ ಅವರಿಗೆ ವಿದ್ಯುತ್ ಶಾಕ್ ತಾಗಿ ಅವರು ಕಿರುಚಿದ್ದಾರೆ ಎನ್ನಲಾಗಿದೆ. ಶಬ್ದ ಕೇಳಿ ಮನೆಯವರು  ಸ್ಥಳಕ್ಕೆ ಹೋದಾಗ ಅವರು ಬಿದ್ದಿದ್ದರು. ಬಳಿಕ ಸುಳ್ಯ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ

- Advertisement -

Latest News

error: Content is protected !!