Sunday, April 28, 2024
Homeಕರಾವಳಿಸುಬ್ರಮಣ್ಯದಲ್ಲಿ ನವವಿವಾಹಿತೆ ಪಾಲಿಗೆ ವಿಲನ್ ಆದ ಮಾಜಿ ಪ್ರಿಯಕರ : ಯುವತಿಯ ನಗ್ನ ಫೋಟೋಗಳನ್ನು ಪತಿಗೆ...

ಸುಬ್ರಮಣ್ಯದಲ್ಲಿ ನವವಿವಾಹಿತೆ ಪಾಲಿಗೆ ವಿಲನ್ ಆದ ಮಾಜಿ ಪ್ರಿಯಕರ : ಯುವತಿಯ ನಗ್ನ ಫೋಟೋಗಳನ್ನು ಪತಿಗೆ ಕಳುಹಿಸಿದ ಯುವಕ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತಿ

spot_img
- Advertisement -
- Advertisement -

ಸುಬ್ರಮಣ್ಯ:  ಮಾಜಿ ಪ್ರಿಯಕರ ಯುವತಿಯ ನಗ್ನ ಫೋಟೋಗಳನ್ನು ಆಕೆಯ ಪತಿಯ ಕಳುಹಿಸಿದ ಪರಿಣಾಮ ನವವಿವಾಹಿತೆಯ ವೈವಾಹಿಕ ಬದುಕು ಮುರಿದು ಬಿದ್ದ ಘಟನೆ ಸುಬ್ರಮಣ್ಯದಲ್ಲಿ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್​ ಠಾಣಾ ವ್ಯಾಪ್ತಿಯ ವಿಜೇಶ್ ಎಂಬ ವ್ಯಕ್ತಿ ಹಾಗೂ ಕಡಬ ತಾಲೂಕಿನ 26 ವರ್ಷದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. 2016 ನವೆಂಬರ್ ತಿಂಗಳ 2 ನೇ ವಾರದ ಒಂದು ದಿನ ಪುತ್ತೂರಿಗೆ ಕೆಲಸಕ್ಕೆ ಹೋಗಿದ್ದಾಗ ಆಕೆಯನ್ನು ಚಹಾ ಕುಡಿಯಲು ಹೋಟೆಲ್‌ಗೆ ಹೋಗೋಣ ಎಂದು ಒತ್ತಾಯ ಮಾಡಿದ್ದಾನೆ.

ನಂತರ ಆರೋಪಿ ವಿಜೇಶ್ ತನ್ನ ಆಲ್ಟೋ ಕಾರಿನಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಟೆಲ್‌ಗೆ ಹೋಗದೆ ಬಲವಂತವಾಗಿ ಮಂಗಳೂರಿನ ಸುರತ್ಕಲ್ ಬಳಿಯ ಖಾಸಗಿ ಹೋಟೆಲ್​ಗೆ ಕರೆದೊಯ್ದಿದ್ದಾನೆ. ನಂತರ ಆಕೆಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಮಾಡಿ, ಆಕೆಯ ನಗ್ನ ಸ್ಥಿತಿಯಲ್ಲಿನ ವಿಡಿಯೋ ಮತ್ತು ಫೋಟೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈಕೆ ದಿನಾಂಕ 03.05.2021 ರಂದು ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾಳೆ. ಆದರೆ ಆರೋಪಿ ವಿಜೇಶ್ ಈ ಯುವತಿಯ ಗಂಡನಿಗೆ ಆಕೆಯ ನಗ್ನ ಫೋಟೋಗಳನ್ನು ಕಳುಹಿಸಿದ್ದಾನೆ. ಪರಿಣಾಮ ಆತ ಇದೀಗ ವಿವಾಹ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿಯ ದೂರಿನ ಮೇಲೆ ಆರೋಪಿ ವಿಜೇಶ್ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುವತಿಯ ಅಪಹರಣ, ಅತ್ಯಾಚಾರ ಹಾಗೂ ಮೋಸದ ಕುರಿತಂತೆ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!