Monday, August 31, 2026
Homeಕರಾವಳಿಉಡುಪಿಉಡುಪಿ ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆ; ಅಯಾ ಶಾಲಾಡಳಿತಕ್ಕೆ ರಜೆ ನೀಡುವ ಅಧಿಕಾರ

ಉಡುಪಿ ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆ; ಅಯಾ ಶಾಲಾಡಳಿತಕ್ಕೆ ರಜೆ ನೀಡುವ ಅಧಿಕಾರ

- Advertisement -
- Advertisement -

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಆಯಾ ಶಾಲೆಗಳಿಗೆ ರಜೆ ನೀಡುವ ಅಧಿಕಾರ ನೀಡಲಾಗಿದೆ.‌

ಗಾಳಿ ಮತ್ತು ಮಳೆ ಹೆಚ್ಚಾದರೆ ಹಾಗೂ ನೆರೆ ಭೀತಿ ಇದ್ದಲ್ಲಿ ರಜೆ ನೀಡುವಂತೆ ಸೂಚನೆ‌ ನೀಡಲಾಗಿದೆ.

ರಜೆಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಆಯಾ ಶಾಲೆಗಳ ಆಡಳಿತಕ್ಕೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ಮಾಹಿತಿ ನೀಡಿದ್ದಾರೆ.

ಇಂದು ಮುಂಜಾನೆಯಿಂದಲೇ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದ್ದು, ಇಂದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ

ಅಲ್ಲದೇ ಮೀನುಗಾರರು ಕಡಲಿಗೆ ಇಳಿಯದಂತೆ ಕೂಡಾ ಎಚ್ಚರಿಕೆ‌ ನೀಡಲಾಗಿದೆ.

- Advertisement -

Latest News

error: Content is protected !!