Monday, June 30, 2025
Homeಅಪರಾಧಕಾಸರಗೋಡು: ಭಾರೀ ಪ್ರಮಾಣದ ಎಂ ಡಿ ಎಂ ಎ ಮಾದಕವಸ್ತು ವಶಕ್ಕೆ ಪಡೆದುಕೊಂಡ ಪೊಲೀಸರು -...

ಕಾಸರಗೋಡು: ಭಾರೀ ಪ್ರಮಾಣದ ಎಂ ಡಿ ಎಂ ಎ ಮಾದಕವಸ್ತು ವಶಕ್ಕೆ ಪಡೆದುಕೊಂಡ ಪೊಲೀಸರು – ಇಬ್ಬರು ಆರೆಸ್ಟ್

spot_img
- Advertisement -
- Advertisement -

ಕಾಸರಗೋಡು: ಬೇಕಲ ಠಾಣಾ ವ್ಯಾಪ್ತಿಯ ಎರಡು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಎಂ ಡಿ ಎಂ ಎ ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಕಳ್ನಾಡ್ ಕಿಯೂರಿನ ಶಾಜಹಾನ್(30) ಮತ್ತು ಕಪ್ಪನಡ್ಕದ ಉಬೈದ್ ಎಂ.ಎ(45) ಬಂಧಿತರು. ಬಂಧಿತರಿಂದ 243. 38 ಗ್ರಾಂ ಮಾದಕ ವಸ್ತುವನ್ನು ವಶಪಡಿಕೊಳ್ಳಲಾಗಿದೆ. ಶನಿವಾರ ರಾತ್ರಿ ಶಾಜಹಾನ್ ನ ಮನೆಗೆ ದಾಳಿ ನಡೆಸಿದ ಪೊಲೀಸರು ಎರಡು ಗ್ರಾಂ ಮಾದಕ ವಸ್ತುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಳಿಕ ರಾಜ್ಯ ಹೆದ್ದಾರಿಯ ಚಂದ್ರಗಿರಿ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಬಂದ ಸ್ಕೂಟರನ್ನು ತಪಾಸಣೆ ನಡೆಸಿದಾಗ 241.38 ಗ್ರಾಂ. ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಡಿ ವೈ ಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು

- Advertisement -
spot_img

Latest News

error: Content is protected !!