Friday, June 5, 2026
Homeತಾಜಾ ಸುದ್ದಿಪುತ್ತೂರು: ಬಸ್ಸಿಗೆ ಸೈಡ್ ಕೊಡುವ ರಭಸದಲ್ಲಿ ಕಾರಿಗೆ ಡಿಕ್ಕಿಯಾಗಿ ಕಂಟೈನರ್ ಲಾರಿ ಪಲ್ಟಿ

ಪುತ್ತೂರು: ಬಸ್ಸಿಗೆ ಸೈಡ್ ಕೊಡುವ ರಭಸದಲ್ಲಿ ಕಾರಿಗೆ ಡಿಕ್ಕಿಯಾಗಿ ಕಂಟೈನರ್ ಲಾರಿ ಪಲ್ಟಿ

- Advertisement -
- Advertisement -

ಪುತ್ತೂರು: ಬಸ್ಸಿಗೆ ಸೈಡ್ ಕೊಡುವ ರಭಸದಲ್ಲಿ ಕಾರಿಗೆ ಢಿಕ್ಕಿಯಾಗಿ ಕಂಟೈನರ್ ಲಾರಿ ಪಲ್ಟಿಯಾದ ಘಟನೆ ಕಬಕ ಸಮೀಪದ ಪೋಲ್ಯದಲ್ಲಿ ನಡೆದಿದೆ.

ಹಿಂದಿನಿಂದ ಓವರ್ ಟೇಕ್ ಮಾಡಿಕೊಂಡು ಬಂದ ಬಸ್ಸಿಗೆ ಸೈಡ್ ಕೊಡುವ ರಭಸದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿ, ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಘಟನೆಯಲ್ಲಿ ಕಾರು ಚಾಲಕನಿಗೆ ಗಾಯಗಳಾಗಿದ್ದು, ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಂಟೈನರ್ ರಸ್ತೆಯ ಅಂಚಿನಲ್ಲಿ ಅಡ್ಡಲಾಗಿ ಮಗುಚಿ ಬಿದ್ದಿದೆ. ಕಂಟೈನರ್ ಚಾಲಕ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾನೆಂಬ ಮಾಹಿತಿ ಇದೆ.

- Advertisement -

Latest News

error: Content is protected !!